ಬೆಂಗಳೂರಿನ 82 ಕೇಂದ್ರಗಳು ಒಳಗೊಂಡು ರಾಜ್ಯಾದ್ಯಂತ ಒಟ್ಟು 404 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಬೆಂಗಳೂರು(ಏ.25): 2017ನೇ ಸಾಲಿನ ಸಿಇಟಿ ಪರೀಕ್ಷೆ ಮೇ 2 ಮತ್ತು 3 ರಂದು ನಡೆಯಲಿದೆ. ಗಡಿನಾಡು ಮತ್ತು ಹೊರನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಮೇ 4ರಂದು ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಮೊದಲ ಬಾರಿಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಶ್ನೆಪತ್ರಿಕೆ ಮುದ್ರಣವಾಗಲಿದೆ. ಬೆಂಗಳೂರಿನ 82 ಕೇಂದ್ರಗಳು ಒಳಗೊಂಡು ರಾಜ್ಯಾದ್ಯಂತ ಒಟ್ಟು 404 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
