ಪೆಟ್ರೋಲ್ ಜೊತೆ ಶೇ.15ರಷ್ಟು ಮೆಥನಾಲ್ ಬೆರೆಸುವ ನೀತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಮುಂಬೈ: ಪೆಟ್ರೋಲ್ ಜೊತೆ ಶೇ.15ರಷ್ಟು ಮೆಥನಾಲ್ ಬೆರೆಸುವ ನೀತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಇದರಿಂದ ಇಂಧನ ದರ ಇಳಿಯುವುದರ ಜೊತೆಗೆ ವಾಯು ಮಾಲಿನ್ಯವೂ ತಗ್ಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.

ಸಭೆಯೊಂದರಲ್ಲಿ ಮಾತನಾಡಿದ ಗಡ್ಕರಿ, ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಪೆಟ್ರೋಲ್ ಜೊತೆ ಮೆಥನಾಲ್ ಬೆರೆಸುವ ನೀತಿ ಘೋಷಿಸಲಾಗುವುದು ಎಂದರು.

ಪೆಟ್ರೋಲ್‌ಗೆ ಹೋಲಿಸಿದರೆ ಕಲ್ಲಿದ್ದಲು ಉಪ ಉತ್ಪನ್ನವಾದ ಮೆಥನಾಲ್‌ಗೆ ಪ್ರತಿ ಲೀಟರ್‌ಗೆ 22 ರು. ವೆಚ್ಚವಾಗುತ್ತದೆ. ಚೀನಾ 17 ರು.ಗೆ ಮೆಥನಾಲ್ ಉತ್ಪಾದಿಸುತ್ತಿದೆ ಎಂದು ಹೇಳಿದರು.