ಬೆಂಗಳೂರು [ ಆ.08]: ರಾಜ್ಯದಲ್ಲಿ ಮುಂಗಾರು ಅಬ್ಬರಿಸುತ್ತಿದೆ. ಹಲವು ಜಿಲ್ಲೆಗಳು ಮಳೆಯ ಅಬ್ಬರಕ್ಕೆ ತತ್ತರಿಸುತ್ತಿವೆ. ಆಶ್ಲೇಷ ಮಳೆ ತನ್ನ ಆವೇಶ ಮುಂದುವರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 

ಅತ್ತ ಉತ್ತರ ಕರ್ನಾಟಕ ಮಳೆಯಿಂದ ತತ್ತರಿಸುತ್ತಿದ್ದರೆ, ಇತ್ತ ದಕ್ಷಿಣ ಕರ್ನಾಟಕವೂ ಮಳೆಯಬ್ಬರದಿಂದ ನಲುಗುತ್ತಿದೆ. ಪ್ರವಾಹದಿಂದ ನಲುಗಿರುವ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾರಚರಣೆ ಮುಂದುವರಿದಿದೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಕ್ಷಣಾ ಕಾರ್ಯದಲ್ಲಿ  NDRF, SDRF, ಭಾರತೀಯ ಸೇನಾ ಪಡೆಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳಿಂದ ಸಾವಿರಾರು ಜನರ ಸ್ಥಳಾಂತರ ಮಾಡಲಾಗಿದೆ. 

ಒಟ್ಟು 21 ತಾಲೂಕುಗಳಲ್ಲಿ 280ಕ್ಕೂ ಅಧಿಕ ಹಳ್ಳಿಗಳು ಪ್ರವಾಹದಿಂದ ಮುಳುಗಿದ್ದು, 80 ರಕ್ಷಣಾ ಕೇಂದ್ರಗಳನ್ನು ತೆರೆದು ರಕ್ಷಣೆ ನೀಡಲಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 400ಕ್ಕೂ ಅಧಿಕ  ಮನೆಗಳು ಹಾನಿಯಾಗಿವೆ.