ಖ್ಯಾತ ವನ್ಯಜೀವಿ ತಜ್ಞ ಡಾ. ಉಲ್ಲಾಸ್ ಕಾರಂತ್ ನಿರ್ದೇಶಕರಾಗಿರುವ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ-ಇಂಡಿಯಾದಲ್ಲಿ ವಿದೇಶಿ ದೇಣಿಗೆ ಹಣ ದುರುಪಯೋಗವಾಗಿರುವ ಆರೋಪದ ಸಂಬಂಧ ಪರಿಶೀಲನೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಬೆಂಗಳೂರು: ಖ್ಯಾತ ವನ್ಯಜೀವಿ ತಜ್ಞ ಡಾ. ಉಲ್ಲಾಸ್ ಕಾರಂತ್ ನಿರ್ದೇಶಕರಾಗಿರುವ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ-ಇಂಡಿಯಾದಲ್ಲಿ ವಿದೇಶಿ ದೇಣಿಗೆ ಹಣ ದುರುಪಯೋಗವಾಗಿರುವ ಆರೋಪದ ಸಂಬಂಧ ಪರಿಶೀಲನೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ-ಇಂಡಿಯಾದಿಂದ ಫಾರಿನ್ ಫಂಡ್ ದುರುಪಯೋಗವಾಗುತ್ತಿರುವುದಾಗಿ ಆರೋಪಿಸಿ ಐಎಫ್ಎಸ್ ಅಧಿಕಾರಿ ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ನಿರ್ದೇಶಕ ಆರ್. ಗೋಕುಲ್ ಅವರ ಪತ್ನಿ ಅನಿತಾ ಗೋಕುಲ್ ಅವರು ಬರೆದಿದ್ದ ದೂರಿನ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಅನಿಲ್ ಕುಮಾರ್ ಧಸ್ಮಾನೆ ಅವರು, ಉಲ್ಲಾಸ ಕಾರಂತ್ ಅವರ ಸಂಸ್ಥೆ ವಿದೇಶಿ ಅನುದಾನ ದುರುಪಯೋಗ ಮಾಡಿಕೊಳ್ಳುತ್ತಿರುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ, ವನ್ಯಜೀವಿ ತಜ್ಞರಾದ ಡಾ. ಉಲ್ಲಾಸ್ ಕಾರಂತ್ ಮತ್ತು ಪ್ರವೀಣ್ ಭಾರ್ಗವ್ ಅವರಿಂದ ತಮ್ಮ ಪತ್ನಿ ಹಾಗೂ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ಅನಿತಾ ಗೋಕುಲ್ ಅವರು ಮಾಡಿರುವ ಮನವಿಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರದ ಗಮನಕ್ಕೆ ತಂದು ಸೂಕ್ತ ರಕ್ಷಣೆ ಪಡೆಯುವಂತೆ ಸೂಚಿಸಿದ್ದಾರೆ.
