ಮುಂದಿನ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆ ಇರುವುದರಿಂದ ರಾಜ್ಯದ ಹಲವರಿಗೆ ಕೇಂದ್ರ ಸಚಿವರಾಗುವ ಅದೃಷ್ಟ ಒಲಿಯಲಿದೆ. ಜಾತಿ ಸಮೀಕರಣ ಆದ್ಯತೆ ಮೇಲೆ ರಾಜ್ಯದಿಂದ ಐವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಭಾನುವಾರ ಮುಹೂರ್ತ ಫಿಕ್ಸ್ ಆಗಿದೆ. ಮುಂದಿನ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆ ಇರುವುದರಿಂದ ರಾಜ್ಯದ ಹಲವರಿಗೆ ಕೇಂದ್ರ ಸಚಿವರಾಗುವ ಅದೃಷ್ಟ ಒಲಿಯಲಿದೆ. ಜಾತಿ ಸಮೀಕರಣ ಆದ್ಯತೆ ಮೇಲೆ ರಾಜ್ಯದಿಂದ ಐವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ನಡೆದಿರುವುದರಿಂದ ಲಿಂಗಾಯತ ಕೋಟಾದಡಿ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ. ಈಗಾಗಲೇ ಸಂಸದರಾದ ಸುರೇಶ್ ಅಂಗಡಿ, ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಪಿ.ಸಿ.ಮೋಹನ್, ನಳಿನ್‌ಕುಮಾರ್ ಕಟೀಲು ಹಾಗೂ ಭಗವಂತ ಖೂಬಾ, ಪ್ರಭಾಕರ ಕೋರೆ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಸಚಿವರಾಗಿರುವ ಡಿ.ವಿ.ಸದಾನಂದ ಗೌಡರನ್ನು ಮುಂದುವರೆಸಲಾಗುವುದೋ ಅಥವಾ ರಾಜ್ಯ ರಾಜಕಾರಣಕ್ಕೆ ವಾಪಸ್ ಕಳುಹಿಸಲಾಗುವುದೋ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ. ಜತೆಗೆ ಕೇಂದ್ರ ಸಚಿವ ಅನಂತಕುಮಾರ್ ಖಾತೆಯಲ್ಲಿ ಕೂಡ ಬದಲಾವಣೆಯಾಗುವ ಸಂಭವವಿದೆ.
ರೇಸ್ನಲ್ಲಿರೋನಾಯಕರು !
ಶ್ರೀರಾಮಲು, ಬಳ್ಳಾರಿ ಸಂಸದ
ಸುರೇಶ್ ಅಂಗಡಿ, ಬೆಳಗಾವಿ ಸಂಸದ
ಶಿವಕುಮಾರ್ ಉದಾಸಿ, ಹಾವೇರಿ ಸಂಸದ
ಪ್ರಭಾಕರ್ ಕೋರೆ, ರಾಜ್ಯಸಭಾ ಸದಸ್ಯ
ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ- ಧಾರವಾಡ ಸಂಸದ
ನಳೀನ್ ಕುಮಾರ್ ಕಟೀಲ್, ದಕ್ಷಿಣಕನ್ನಡ ಸಂಸದ
ಶೋಭಾ ಕರಂದ್ಲಾಜೆ, ಉಡುಪಿ- ಚಿಕ್ಕಮಗಳೂರು ಸಂಸದೆ
