ಹೆಚ್ಚಿನ ವಿಚಾರಣೆಗೆ ಕಾರ್ತಿ ಚಿದಂಬರಂ ಮುಂಬೈಗೆ; ಇಂದ್ರಾಣಿ ಮುಖರ್ಜಿ ಭೇಟಿ ಸಾಧ್ಯತೆ

First Published 4, Mar 2018, 1:37 PM IST
CBI Takes Karti Chidambaram to Mumbai to Confront Him With Indrani and Peter
Highlights

ಐಎನ್’ಎಕ್ಸ್ ಮೀಡಿಯಾ ಅಕ್ರಮ ವ್ಯವಹಾರ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ರವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದ್ದು  ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆ ತರಲಿದೆ. 

ನವದೆಹಲಿ (ಮಾ.04): ಐಎನ್’ಎಕ್ಸ್ ಮೀಡಿಯಾ ಅಕ್ರಮ ವ್ಯವಹಾರ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ರವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದ್ದು  ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆ ತರಲಿದೆ. 

ಐಎನ್’ಎಕ್ಸ್ ಮೀಡಿಯಾ ಮುಖ್ಯಸ್ಥರಾಗಿದ್ದ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿಯನ್ನು ಕಾರ್ತಿ ಚಿದಂಬರಂ ಮುಖಾಮುಖಿಯಾಗುವ ಸಾಧ್ಯತೆ ಇದೆ.  ಇಂದ್ರಾಣಿ-ಪೀಟರ್ ಮುಖರ್ಜಿ ಐಎನ್’ಎಕ್ಸ್ ಮೀಡಿಯಾವನ್ನು ನಡೆಸುತ್ತಿದ್ದಾಗ [ಈಗ 9X] ಫಾರಿನ್ ಇನ್ವೆಸ್ಟ್’ಮೆಂಟ್ ಪ್ರಮೋಶನ್ ಬೋರ್ಡ್ ಕ್ಲಿಯರೆನ್ಸ್’ಗಾಗಿ ಕಾರ್ತಿ ಚಿದಂಬರಂ 3.5 ಕೋಟಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.  ಸಿಬಿಐ ತನಿಖೆ ವೇಳೆ ಇಂದ್ರಾಣಿ ಮುಖರ್ಜಿ ಇದನ್ನು ಬಹಿರಂಗಗೊಳಿಸಿದ್ದರು. ಅವರ ಹೇಳಿಕೆ ಆಧರಿಸಿ ಕಾರ್ತಿ ಚಿದಂಬರಂ ಅವರನ್ನು ಫೆ. 28 ರಂದು ಬಂಧಿಸಲಾಗಿತ್ತು. ಮಾರ್ಚ್ 1 ರಂದು ೫ ದಿನಗಳ ಕಾಲ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿತ್ತು. ಇಂದು ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆ ತರಲಾಗಿದೆ. 
 
 

loader