ಗೃಹ ಸಚಿವಾಲಯದ ಅನುಮತಿಯಿಲ್ಲದೇ ವಿದೇಶದಿಂದ ತಮ್ಮ ಸಂಸ್ಥೆಗೆ ದೇಣಿಗೆ ಪಡೆದಿದ್ದಾರೆ ಎಂದು ಗೃಹ ಸಚಿವಾಲವು ದೂರು ದಾಖಲಿಸಿತ್ತು.
ನವದೆಹಲಿ (ಜ.03): ವಿದೇಶಿ ದೇಣಿಗೆ ಪಡೆಯುವಾಗ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ ಟೀಸ್ಟಾ ಸೆಟಲ್ವಾಡ್ ಸಂಸ್ಥೆ ವಿರುದ್ಧ ಸಿಬಿಐ ಇಂದು ಆರೋಪಪಟ್ಟಿ ಸಲ್ಲಿಸಿದೆ.
ಗೃಹ ಸಚಿವಾಲಯದ ಅನುಮತಿಯಿಲ್ಲದೇ ವಿದೇಶದಿಂದ ತಮ್ಮ ಸಂಸ್ಥೆಗೆ ದೇಣಿಗೆ ಪಡೆದಿದ್ದಾರೆ ಎಂದು ಗೃಹ ಸಚಿವಾಲವು ದೂರು ದಾಖಲಿಸಿತ್ತು.
ಜುಲೈ 2015ರಲ್ಲಿ ಗೃಹ ಸಚಿವಾಲಯವು ಪ್ರಕರಣವನ್ನು ತನಿಖೆ ಮಾಡುವಂತೆ ಸಿಬಿಐಗೆ ವಹಿಸಿತ್ತು. ಆ ಬಳಿಕ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿ ಮುಂಬೈಯ ಜುಹೂನಲ್ಲಿರುವ ಟೀಸ್ಟಾ ನಿವಾಸದ ಮೇಲೆ ದಾಳಿ ನಡೆಸಿತ್ತು.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 1976 ಹಾಗೂ 2010 ಹಾಗೂ ಭಾರತೀಯ ದಂಡ ಕಾಯ್ದೆಯ ವಿವಿಧ ಸೆಕ್ಷನ್’ಗಳಡಿಯಲ್ಲಿ ಕ್ರಿಮಿನಲ್ ಷಡ್ಯಂತ್ರಕ್ಕೆ ಸಂಬಂಧಿಸಿದ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.
