ಹಳೇ ಲವ್ ದ್ವೇಷ, ಮಾಜಿ ಬಾಯ್‌ಫ್ರೆಂಡ್ ಪತ್ನಿ-6 ತಿಂಗಳ ಮಗುವಿಗೆ ಬೆಂಕಿ ಹಚ್ಚಿ ಕೊಂದ ಮಹಿಳೆ, ಪ್ರೀತಿ ಬ್ರೇಕ್ ಅಪ್ ಆಗಿ ಬೇರೆ ಮದುವೆಯಾಗಿದ್ದಾನೆ. ಆದರೆ ಈಕೆಗೆ ಆತನೇ ಬೇಕು. ಇದಕ್ಕಾಗಿ ಮಾಡಿದ ಕೆಲಸಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿದೆ. 

ನಲ್ಗೊಂಡ (ಫೆ.02)ಅಕ್ರಮ ಸಂಬಂಧ ವಿಚಾರದಲ್ಲಿ ಏನೆಲ್ಲಾ ದುರಂತಗಳು ನಡೆದಿದೆ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ತನ್ನ ಹಳೇ ಲವರ್ ಬೇರೆ ಮದುವೆಯಾದ ಬಳಿಕ ನನ್ನನ್ನು ನಿರ್ಲಕ್ಷಿಸಿದ್ದಾನೆ. ಮಾತನಾಡುತ್ತಿಲ್ಲ, ನನ್ನಜೊತೆಗಿಲ್ಲ ಎಂದು ಮಹಿಳೆ ರೊಚ್ಚಿಗೆದ್ದಿದ್ದಾಳೆ. ಇಷ್ಟೇ ಆಗಿದ್ದರೆ ಮಾತುಕತೆ ಅಥವಾ ಬೇರೆ ಯಾವುದೋ ರೀತಿಯಲ್ಲಿ ಸಮಸ್ಯೆ ಬಗೆ ಹರಿಸಬಹುದಿತ್ತು. ಆದರೆ ಈಕೆ ತನ್ನ ಆಕ್ರೋಶವನ್ನು ಮಾಜಿ ಗೆಳೆಯ ಪತ್ನಿ ಹಾಗೂ ನವಜಾತ ಮಗುವಿನ ಮೇಲೆ ತೋರಿಸಿದ್ದಾಳೆ. ಮಾಜಿ ಗೆಳೆಯನ ಪತ್ನಿ ಹಾಗೂ 6 ತಿಂಗಳ ಮಗುವಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾಳೆ. ತನ್ನ ಮಾಜಿ ಗೆಳೆಯ ತನಗೆ ಸಿಗಬೇಕು ಎಂದು ಈ ಕೃತ್ಯ ಮಾಡಿದ್ದಾಳೆ. ಈಕೆಯ ದುರಾಸೆಗೆ ಎರಡು ಅಮಾಯಕ ಜೀವನಗಳು ಬಲಿಯಾದ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ಪ್ರೀತಿ ಬ್ರೇಕ್ ಅಪ್ ಬೇರೆ ಮದುವೆ

ನಲ್ಗೊಂಡ ಜಿಲ್ಲೆಯ ಇಬ್ಬರಲ್ಲಿ ಪ್ರೀತಿ ಶುರುವಾಗಿದೆ. ಆದರೆ ಕೆಲ ಕಾರಣಗಳಿಂದ ಇವರ ಪ್ರೀತಿ ಬ್ರೇಕ್ ಅಪ್ ಆಗಿತ್ತು. ಬಳಿಕ ಇಬ್ಬರು ತಮ್ಮ ತಮ್ಮ ದಾರಿಯಲ್ಲಿ ಮುಂದುವರಿದಿದ್ದರು. ಇಲ್ಲ ಸಲ್ಲದ ಕಾರಣ ಹೇಳಿ ಮಹಿಳೆ ಬ್ರೇಕ್ ಅಪ್ ಮಾಡಿಕೊಂಡಿದ್ದಳು. ಮಹಿಳೆ ಬೇರೆ ಮದುವೆಯಾಗಿದ್ದಳು. ಮಹಿಳೆಯ ಪತಿ ಕೆಲ ವರ್ಷದಲ್ಲಿ ನಿಧನರಾಗಿದ್ದರು. ಇತ್ತ ಕೆಲ ವರ್ಷಗಳು ಹೀಗೆ ಉರುಳಿತ್ತು. ಬಳಿಕ ಮಾಜಿ ಗೆಳೆಯ ಬೇರೆ ಮದುವೆಯಾಗಿದ್ದಾನೆ. ಇ ಇದು ಮಹಿಳೆಯ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ಮಾಜಿ ಗೆಳೆಯ ತನಗೆ ಬೇಕು ಎಂದು ಕಿತಾಪತಿ ಶುರುಮಾಡಿದ್ದಾಳೆ. ಮಾಜಿ ಗೆಳೆಯನಿಗೆ ಫೋನ್ ಮಾಡಲು ಆರಂಭಿಸಿದ್ದಾಳೆ. ಭೇಟಿಯಾಗಲು ಪ್ರಯತ್ನಿಸಿದ್ದಾಳೆ. ಆದರೆ ಮದುವೆಯಾಗಿದ್ದ ಕಾರಣ ಮಾಜಿ ಗೆಳೆತಿಯನ್ನು ನಿರ್ಲಕ್ಷಿಸಿದ್ದ. ಇದು ಮಹಿಳೆಯ ಆಕ್ರೋಶಕ್ಕೆ ಕಾರಣಾಗಿತ್ತು. ನನ್ನ ಮಾಜಿ ಗೆಳೆಯ ತನಗೇ ಸಿಗಬೇಕು ಎಂದು ಹಠ ಹಿಡಿದಿದ್ದಳು.

ಮಾಜಿ ಗೆಳೆಯನಿಗೆ ಗಂಡು ಮಗು

ಮಾಜಿ ಗಳೆಯ ಗಂಡು ಮಗುವಿನ ತಂದೆಯಾದ ಬಳಿಕ ಈ ಮಹಿಳೆಯ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ತನ್ನ ಮಾಜಿ ಗೆಳೆಯನ ಮತ್ತೆ ಪಡೆಯಲು ಭಾರಿ ಪ್ಲಾನ್ ಮಾಡಿದ್ದಾಳೆ. ಇದಕ್ಕಾಗಿ ಮಾಜಿ ಗೆಳೆಯನ ಪತ್ನಿ ಹಾಗೂ ಮಗುವನ್ನೇ ಹತ್ಯೆ ಮಾಡಲು ಮುಂದಾಗಿದ್ದಾಳೆ. ಮಾಜಿ ಗೆಳೆಯ ಮನೆಯಲ್ಲಿ ಇಲ್ಲದ ವೇಳೆ ತೆರಳಿದ ಈ ಮಹಿಳೆ, ಖಾರದ ಪುಡಿ, ಚಾಕು, ಪೆಟ್ರೋಲ್ ಸೇರಿದಂತೆ ಎಲ್ಲಾ ತಯಾರಿ ಜೊತೆ ತೆರಳಿದ್ದಾಳೆ. ಮಾಜಿ ಗೆಳೆಯ ಹಾಗೂ ಆತನ 6 ತಿಂಗಳ ಗಂಡು ಮಗುವಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಮಗುವಿನ ಉಳಿಸಲು ಪ್ರಯತ್ನಿಸಿದ ಮಾಜಿ ಗೆಳೆಯನ ಪತ್ನಿಗೆ ಸಾಧ್ಯವಾಗಲಿಲ್ಲ. ಇಬ್ಬರು ದುರಂತ ಅಂತ್ಯಕಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹತ್ಯೆ ಹಿಂದೆ ಯಾರಿದ್ದಾರೆ. ಮಹಿಳೆ ಮಾತ್ರವೇ ಅಥವಾ ಬೇರೆ ಯಾರಾದರೂ ಇದ್ದಾರ, ಕೇವಲ ಲವ್, ಬ್ರೇಕ್ ಅಪ್‌ಗೆ ಈ ರೀತಿ ದ್ವೇಷ ಸಾಧಿಸಿದ್ದಾರಾ ಅನ್ನೋ ಎಲ್ಲಾ ಆಯಾಮಗಳ ಕುರಿತು ತನಿಖೆ ಆರಂಭಗೊಂಡಿದೆ. ಇತ್ತ ಮಾಜಿ ಗೆಳೆಯನ ಆಕ್ರಂದನ ಮುಗಿಲು ಮುಟ್ಟಿದೆ.