ಈರೋಡಿನ ಭವಾನಿ ಸಾಗರ ಅಣೆಕಟ್ಟು ಪರಿಶೀಲಿಸುವ ತಂಡ, ಬಳಿಕ ತಂಜಾವೂರು, ತಿರವರೂರು, ನಾಗಪಟ್ಟಿಣಂ ಜಿಲ್ಲೆಗಳಿಗೆ ಭೇಟಿ

ಕೊಯಮತ್ತೂರು: ಕರ್ನಾಟಕದಲ್ಲಿ ಎರಡು ದಿನಗಳ ಅಧ್ಯಯನ ಮುಗಿಸಿದ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌.ಝಾ ನೇತೃತ್ವದ 13 ಸದಸ್ಯರ ತಂಡ ಭಾನುವಾರ ಮೆಟ್ಟೂರು ತಲುಪಿ ಅಣೆಕಟ್ಟಿನ ನೀರಿನ ಮಟ್ಟ, ಒಳ ಹರಿವು, ಹೊರಹರಿವಿನ ಪ್ರಮಾಣವನ್ನು ಪರಿಶೀಲಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ ಅಲ್ಲಿನ ಸಚಿವ ಎಡಪಡಿ ಪಳನಿಸಾಮಿ ರಾಜ್ಯದ ಹಿತ ಕಾಯಬೇಕೆಂದು ತಂಡಕ್ಕೆ ಮನವಿ ಸಲ್ಲಿಸಿದ್ದಾರೆ. ಸೋಮವಾರ ಈರೋಡಿನ ಭವಾನಿ ಸಾಗರ ಅಣೆಕಟ್ಟು ಪರಿಶೀಲಿಸುವ ತಂಡ, ಬಳಿಕ ತಂಜಾವೂರು, ತಿರವರೂರು, ನಾಗಪಟ್ಟಿಣಂ ಜಿಲ್ಲೆಗಳಿಗೆ ಭೇಟಿ ನೀಡಲಿದೆ.