Asianet Suvarna News Asianet Suvarna News

ಆಪರೇಷನ್ ಕಮಲಕ್ಕೆ ಭಯೋತ್ಪಾದಕರಿಂದ ದುಡ್ಡು..? ಕೋರ್ಟ್‌ನಲ್ಲಿ ದೂರು

ಸುಪ್ರೀಂ ಕೋರ್ಟ್ ತೀರ್ಪಿನಿಂದ ನಿರಾಳರಾಗಿದ್ದ ಅನರ್ಹ ಶಾಸಕರಿಗೆ ಈಗ ಇನ್ನೊಂದು ಸಂಕಟ ಎದುರಾಗಿದೆ. ಇದೀಗ ಅನರ್ಹ ಶಾಸಕರ ವಿರುದ್ಧ ದೇಶದ್ರೋಹ ಆರೋಪದಡಿಯಲ್ಲಿ ಎನ್‌ಐಎ ಕೋರ್ಟ್‌ನಲ್ಲಿ ದೂರು ದಾಖಲಾಗಿದ್ದು, ಇದು ಉಪಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

case filed in nia court against disqualified mla under sedition
Author
Bangalore, First Published Nov 25, 2019, 12:21 PM IST

ಬೆಂಗಳೂರು(ನ.25): ಸುಪ್ರೀಂ ಕೋರ್ಟ್ ತೀರ್ಪಿನಿಂದ ನಿರಾಳರಾಗಿದ್ದ ಅನರ್ಹ ಶಾಸಕರಿಗೆ ಈಗ ಇನ್ನೊಂದು ಸಂಕಟ ಎದುರಾಗಿದೆ. ಇದೀಗ ಅನರ್ಹ ಶಾಸಕರ ವಿರುದ್ಧ ದೇಶದ್ರೋಹ ಆರೋಪದಡಿಯಲ್ಲಿ ಎನ್‌ಐಎ ಕೋರ್ಟ್‌ನಲ್ಲಿ ದೂರು ದಾಖಲಾಗಿದ್ದು, ಇದು ಉಪಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅನರ್ಹ ಶಾಸಕರ ವಿರುದ್ದ ಖಾಸಗಿ ದೂರು ದಾಖಲಾಗಿದ್ದು, ಎನ್‌ಐಎ ಕೋರ್ಟ್‌ಗೇ ದೂರು ದಾಖಲಿಸಲಾಗಿದೆ. ದೇಶದ್ರೋಹದ ಆರೋಪದಲ್ಲಿ ಅನರ್ಹ ಶಾಸಕರ ವಿರುದ್ದ ದೂರು ದಾಖಲಾಗಿದ್ದು, 17 ಅನರ್ಹ ಶಾಸಕರು ಹಾಗು ಇತರರ ವಿರುದ್ದ ದೂರು ನೀಡಲಾಗಿದೆ.

ಶೀಘ್ರದಲ್ಲೇ ತನ್ವೀರ್‌ ಸೇಠ್‌ ಡಿಸ್ಚಾರ್ಜ್‌ ಸಾಧ್ಯತೆ

ಹಿರಿಯ ವಕೀಲ ಬಾಲನ್ ಅವರು ದೂರು ದಾಖಲಿಸಿದ್ದು, ಅಪರೇಷನ್ ಕಮಲಕ್ಕೆ ಸಾವಿರಾರು‌ ಕೋಟಿ ಹಣ ವೆಚ್ಚ ಮಾಡಲಾಗಿದೆ. 17 ಅನರ್ಹ ಶಾಸಕರು ಈ ಅಕ್ರಮ ಹಣ ಪಡೆದು ಬಿಜೆಪಿ ಸೇರಿದ್ದಾರೆ. ಅಪರೇಷನ್ ಕಮಲಕ್ಕೆ ಅಕ್ರಮ ಹಣ ಬಳಕೆ ಮಾಡಲಾಗಿದೆ. ಈ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ತಾವೇ ಹೊಯ್ಸಳ ವಾಹನ ಚಲಾಯಿಸಿದ ಕಮಿಷನರ್‌!: ಹುಳಿಮಾವು ಕೆರೆಯತ್ತ ದೌಡು!

ಯಡಿಯೂರಪ್ಪ ಅನರ್ಹ ಶಾಸಕರಿಂದ ಸರ್ಕಾರ ಬಂತು ಎಂದು ಹೇಳಿಕೆ ನೀಡಿದ್ದಾರೆ. ಅನರ್ಹ ಶಾಸಕರು ಬಿಜೆಪಿ ಸೇರಿದ ಕೂಡಲೇ ಮಂತ್ರಿಗಳು ಎಂದು ಯಡಿಯೂರಪ್ಪ ಹೇಳಿದ್ದಾರೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಶಕ್ತಿಗಳಿಂದ ಹಣ ಬರುತ್ತಿದೆ ಎಂಬ ಆರೋಪವಿದೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು ಎಂದು ಆರೋಪಿಸಿ ವಕೀಲ ಬಾಲನ್ ಖಾಸಗಿ ದೂರು ನೀಡಿದ್ದಾರೆ.

'ಎಂಟಿಬಿ ಎದೆಯಲ್ಲಿ ಆಗ ಸಿದ್ದು, ಈಗ ಬಿಎಸ್‌ವೈ, ಸೋತ ಮೇಲೆ ಯಾರು?'

NIA ನ್ಯಾಯಾಲಯ ಎಂದರೇನು?

ಎನ್‌ಐಎ(ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ರಾಷ್ಟ್ರೀಯ ತನಿಖಾ ಸಂಸ್ಥೆ ಭಾರತದ ಸರ್ಕಾರದ ತನಿಖಾ ಸಂಸ್ಥೆಯಾಗಿದ್ದು, ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯುವುದು ಈ ಸಂಸ್ಥೆಯ ಪ್ರಮುಖ ಉದ್ದೇಶ. ಭಯೋತ್ಪಾದಕ ಚಟುವಟಿಕೆ ವಿರೋಧಿ ಕಾನೂನುಗಳನ್ನು ಈ ನ್ಯಾಯಾಲಯ ನಿರ್ವಹಿಸುತ್ತದೆ. ಯಾವುದೇ ಭಯೋತ್ಪಾದಕ ಸಂಬಂಧಿಸಿದ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರದ ಯಾವುದೇ ಅನುಮತಿ ಇಲ್ಲದೆ, ಕ್ರಮ ಕೈಗೊಳ್ಳುವ ವಿಶೇಷ ಅಧಿಕಾರಿ ಎನ್‌ಐಎಗೆ ಇರುತ್ತದೆ. 

Follow Us:
Download App:
  • android
  • ios