Asianet Suvarna News Asianet Suvarna News

ಶೀಘ್ರದಲ್ಲೇ ತನ್ವೀರ್‌ ಸೇಠ್‌ ಡಿಸ್ಚಾರ್ಜ್‌ ಸಾಧ್ಯತೆ

ತನ್ವೀರ್‌ ಸೇಠ್‌ರ ಕತ್ತಿನ ಭಾಗದ ನರಗಳು ಹಾಗೂ ಧ್ವನಿಪೆಟ್ಟಿಗೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿರುವ ಸೇಠ್‌ ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗುವ ಸಾಧ್ಯತೆ ಇದೆ. ಇನ್ನು ಡಿಸಿಪಿ ಎಂ. ಮುತ್ತುರಾಜು ನೇತೃತ್ವದ ವಿಶೇಷ ತಂಡ ಪ್ರಕರಣ ಕುರಿತು ತನಿಖೆ ಮುಂದುವರೆಸಿದೆ. 

Mysuru Congress MLA Tanvir Seth health condition improving
Author
Bengaluru, First Published Nov 25, 2019, 10:14 AM IST

ಮೈಸೂರು (ನ. 25): ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಶಾಸಕ ತನ್ವೀರ್‌ ಸೇಠ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

'ಕುಮಾರಸ್ವಾಮಿಗೆ ಮಾಡೋಕೆ ಕೆಲ್ಸ ಇಲ್ಲ, ಇದನ್ನಾದ್ರೂ ಮಾಡ್ಲಿ'

ತನ್ವೀರ್‌ ಸೇಠ್‌ರ ಕತ್ತಿನ ಭಾಗದ ನರಗಳು ಹಾಗೂ ಧ್ವನಿಪೆಟ್ಟಿಗೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿರುವ ಸೇಠ್‌ ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗುವ ಸಾಧ್ಯತೆ ಇದೆ. ಇನ್ನು ಡಿಸಿಪಿ ಎಂ. ಮುತ್ತುರಾಜು ನೇತೃತ್ವದ ವಿಶೇಷ ತಂಡ ಪ್ರಕರಣ ಕುರಿತು ತನಿಖೆ ಮುಂದುವರೆಸಿದೆ.

ಬಿಜೆಪಿಗೆ ಬಹುಮತ ಸಿಗದಿದ್ದರೆ ಜೆಡಿಎಸ್ ಬೆಂಬಲ ನೀಡಲ್ಲ: ಸಿದ್ದರಾಮಯ್ಯ

ಪ್ರಮುಖ ಆರೋಪಿ ಫರ್ಹಾನ್‌ ಪಾಷಾ ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಫರ್ಹಾನ್‌ ಪಾಷಾ ಪೊಲೀಸರ ವಶದಲ್ಲಿದ್ದು, ಉಳಿದ 5 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಭಾನುವಾರದಂದು ಆಸ್ಪತ್ರೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ತನ್ವೀರ್‌ ಸೇಠ್‌ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತನ್ವೀರ್‌ ಸೇಠ್‌ ಅವರ ಮೇಲೆ ಹಲ್ಲೆ ಖಂಡನೀಯ. ಉತ್ತಮವಾಗಿ ಚಿಕಿತ್ಸೆ ನೀಡಲಾಗುತ್ತದೆ. ಶೀಘ್ರ ಗುಣಮುಖರಾಗಲಿದ್ದಾರೆ ಎಂದರು.

Follow Us:
Download App:
  • android
  • ios