ಪಂಜಾಬ್ ಕಾಂಗ್ರೆಸ್‌ನಲ್ಲಿ ಒಳಜಗಳದಿಂದ ಇದೀಗ ಮೊದಲ ವಿಕೆಟ್ ಪತನಗೊಳ್ಳುವುದು ದಟ್ಟವಾದಿದೆ. ಸಿಎಂ ಅಮರಿಂದರ್ ರಾಜೀನಾಮೆಗೆ ನಿರ್ಧರಿಸಿದ್ದಾರೆ. ಟೀಂ ಇಂಡಿಯಾದಲ್ಲೂ ಒಳಜಗಳ ಹೆಚ್ಚಾಗಿದೆ. ನಟ ಸೂನು ಸೂದ್ 20 ಕೋಟಿ ರೂಪಾಯಿ ತೆರೆಗಿ ವಂಚಿಸುವುದಾಗಿ ವರದಿಯಾಗಿದೆ. ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಉಪೇಂದ್ರ, ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ಸೇರಿದಂತೆ ಸೆಪ್ಟೆಂಬರ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಗಾಳಿ; ರಾಜೀನಾಮೆಗೆ ಮುಂದಾದ ಸಿಎಂ ಅಮರಿಂದರ್!

ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯಗಳಲ್ಲಿನ ಒಳಜಗಳ ನಿಯಂತ್ರಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಕರ್ನಾಟಕ, ಪಂಜಾಬ್, ರಾಜಸ್ಥಾನ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಒಳಜಗಳವನ್ನು ಒಂದು ಹಂತಕ್ಕೆ ನಿಯಂತ್ರಿಸಲಾಗಿತ್ತು. ಆದರೆ ಪಂಜಾಬ್‌ನಲ್ಲಿ ಮಾತ್ರ ಭಿನ್ನಮತ ಶಮನಗೊಂಡಿಲ್ಲ. ಇದೀಗ ಪಂಜಾಬ್ ಕಾಂಗ್ರೆಸ್‌ನಲ್ಲಿ ಮತ್ತೆ ಜಗಳ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆಗೆ ಮುಂದಾಗಿದ್ದಾರೆ.

ರೋಹಿತ್‌ಗೆ ಉಪನಾಯಕತ್ವ ಬೇಡ: ಕೊಹ್ಲಿ ಬೇಡಿಕೆ..! ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ವಾ..?

ಭಾರತ ಏಕದಿನ ತಂಡದ ಉಪನಾಯಕನ ಸ್ಥಾನದಿಂದ ರೋಹಿತ್‌ ಶರ್ಮಾ ಅವರನ್ನು ಕೈಬಿಡುವಂತೆ ಬಿಸಿಸಿಐ ಆಯ್ಕೆ ಸಮಿತಿ ಮುಂದೆ ನಾಯಕ ವಿರಾಟ್‌ ಕೊಹ್ಲಿ ಪ್ರಸ್ತಾಪವಿರಿಸಿದ್ದಾರೆ ಎನ್ನುವ ಕುತೂಹಲಕಾರಿ ಬೆಳವಣಿಗೆಯೊಂದನ್ನು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ವರದಿ ಭಾರತೀಯ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಹುಟ್ಟುಹಾಕಿದೆ.

ನಟ ಸೋನು ಸೂದ್‌ನಿಂದ 20 ಕೋಟಿ ಮೌಲ್ಯದ ತೆರಿಗೆ ವಂಚನೆ

ನಟ ಸೋನು ಸೂದ್ ಮತ್ತು ಆತನ ಸಹಚರರು ₹ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಇಲಾಖೆ ನಟನಿಗೆ ಸಂಬಂಧಿಸಿದ ಮುಂಬೈ ನಿವಾಸ ಸೇರಿದಂತೆ ಹಲವಾರು ನಿವೇಶನಗಳನ್ನು ಅವರ ಮೂರು ದಿನಗಳವರೆಗೆ ಪರಿಶೀಲಿಸಿದೆ.

ಯು-ಐ ಚಿತ್ರದ ಅಸಲಿ ಪೋಸ್ಟರ್ ಬಿಟ್ಟು ತಲೆಗೆ ಹುಳ ಬಿಟ್ಟ ಉಪ್ಪಿ!]

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಇಂದು 52ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ತಾವು ನಿರ್ದೇಶಿಸುತ್ತಿರುವ ಮುಂದಿನ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ರಿವೀಲ್ ಮಾಡಿದ್ದಾರೆ. ನಾಮ ಸಿಂಬಲ್ ಹೊಂದಿರುವ ಈ ಚಿತ್ರದ ಹೆಸರು ಯು-ಐ. ಚಿತ್ರದ ಬಗ್ಗೆ ಹೆಚ್ಚಾಗಿ ತಿಳಿಯಲು ಈ ವಿಡಿಯೋ ನೋಡಿ..

ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ಸಿಂಘಮ್‌ ಗರ್ಲ್‌ ಕಾಜಲ್‌ ಪ್ರೆಗ್ನೆಂಟ್‌?

ಜಲ್ ತಮ್ಮ ಮುಂಬರುವ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಈಗ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಾರೆ. ಆಕೆ ತಮ್ಮ ಮುಂಬರುವ ಸಿನಿಮಾ ಘೋಸ್ಟ್‌ನಿಂದ ಸಹ ಹೊರ ಬಿದ್ದಿದ್ದಾರೆ. ಇದಕ್ಕೆ ಕಾರಣ ಅವರ ಪ್ರೆಗ್ನೆಂಸಿ ಎನ್ನುತ್ತಿವೆ ವರದಿಗಳು. ಇಲ್ಲಿದೆ ಪೂರ್ತಿ ವಿವರ. 

ಯಡಿಯೂರಪ್ಪಗೆ ಫುಲ್ ಫ್ರೀಡಂ ಕೊಟ್ಟ ಹೈಕಮಾಂಡ್

ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಫುಲ್ ಫ್ರೀಡಂ ಕೊಟ್ಟಿದೆ.

1 ಕೋಟಿಗೆ ಹರಾಜಾಯ್ತು ಮೋದಿಯವರ 500 ರೂ. ಕೇಸರಿ ಕರ್ಚೀಫ್‌..!

ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆ ಮತ್ತು ಸ್ಮರಣಿಕೆಗಳ ಹರಾಜು ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದ್ದು, ಹಿಂದೆಂದೂ ಕಂಡುಕೇಳರಿಯದ ರೀತಿಯ ಭರ್ಜರಿ ಆರಂಭ ಸಿಕ್ಕಿದೆ.

ಟೀಂ ಇಂಡಿಯಾ ಕೋಚ್‌ ಮತ್ತೆ ಕನ್ನಡಿಗ ಕುಂಬ್ಳೆಗೆ ಮಣೆ ಹಾಕುತ್ತಾ ಬಿಸಿಸಿಐ..?

ಮುಂಬರುವ ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್‌ ರವಿಶಾಸ್ತ್ರಿ ಗುತ್ತಿಗೆ ಅವಧಿ ಮುಗಿಯಲಿದ್ದು, ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಕನ್ನಡಿಗ ಅನಿಲ್ ಕುಂಬ್ಳೆ ಇಲ್ಲವೇ ವಿವಿಎಸ್ ಲಕ್ಷ್ಮಣ್‌ ಅವರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೇಳಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.