‘ನಮ್ಮ ಅಸ್ತಿತ್ವಕ್ಕೇ ಅಪಾಯವನ್ನು ಒಡ್ಡುತ್ತಿರುವ ಇರಾನ್‌ನ ಉಗ್ರರ ಆಡಳಿತವನ್ನು ಅಂತ್ಯಗೊಳಿಸಲು ಅಮೆರಿಕ ಮತ್ತು ಇಸ್ರೇಲ್‌ ಒಟ್ಟಾಗಿ ‘ರೋರಿಂಗ್‌ ಲಯನ್‌’ ಕಾರ್ಯಾಚರಣೆಯನ್ನು ಆರಂಭಿಸಿವೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ಜೆರುಸಲೇಂ: ‘ನಮ್ಮ ಅಸ್ತಿತ್ವಕ್ಕೇ ಅಪಾಯವನ್ನು ಒಡ್ಡುತ್ತಿರುವ ಇರಾನ್‌ನ ಉಗ್ರರ ಆಡಳಿತವನ್ನು ಅಂತ್ಯಗೊಳಿಸಲು ಅಮೆರಿಕ ಮತ್ತು ಇಸ್ರೇಲ್‌ ಒಟ್ಟಾಗಿ ‘ರೋರಿಂಗ್‌ ಲಯನ್‌’ ಕಾರ್ಯಾಚರಣೆಯನ್ನು ಆರಂಭಿಸಿವೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಡಿಯೋ ಸಂದೇಶ ನೀಡಿರುವ ನೆತನ್ಯಾಹು

ಈ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಅವರು, ‘ಕಳೆದ 47 ವರ್ಷಗಳಿಂದ ಇರಾನ್‌ನ ಅಯಾತೊಲ್ಲಾ ಸರ್ಕಾರವು ಇಸ್ರೇಲ್‌ ಮತ್ತು ಅಮೆರಿಕದ ಸಾವನ್ನು(ಅಂತ್ಯ) ಬಯಸಿತ್ತು. ಇದಕ್ಕಾಗಿ ನಮ್ಮ ಜನರನ್ನು ವಿಭಜಿಸಿ, ಅಮೆರಿಕನ್ನರನ್ನು ಕೊಂದು, ತನ್ನ ಸ್ವಂತ ಜನರ ಹತ್ಯೆಯನ್ನೂ ಮಾಡಿದೆ.

ಆಡಳಿತದ ಕೈಗೆ ಅಣ್ವಸ್ತ್ರ ಸಿಕ್ಕರೆ ಮಾನವೀಯತೆಗೇ ಅಪಾಯ.

ಇಂತಹ ಆಡಳಿತದ ಕೈಗೆ ಅಣ್ವಸ್ತ್ರ ಸಿಕ್ಕರೆ ಮಾನವೀಯತೆಗೇ ಅಪಾಯ. ಆದ್ದರಿಂದ ಹೀಗಾಗಲು ಬಿಡಬಾರದು’ ಎಂದು ಕರೆ ನೀಡಿದ್ದಾರೆ.‘ಅಮೆರಿಕ ಮತ್ತು ಇಸ್ರೇಲ್‌ ನಡೆಸುವ ಜಂಟಿ ಕಾರ್ಯಾಚರಣೆಯಿಂದ, ತಮ್ಮ ವಿಧಿ/ಭವಿಷ್ಯವನ್ನು ನಿರ್ಧರಿಸುವ ಅಧಿಕಾರವು ಇರಾನಿಗರಿಗೆ ಸಿಗುತ್ತದೆ. ಇರಾನಿಗರು, ಪರ್ಷಿಯನ್ನರು, ಕಿರ್ದಿಗಳು, ಅಜರ್ಬೈಜಾನಿಗರು, ಬಲೂಚಿಗಳು, ಅಹ್ವಾಜಿಗಳು ದಬ್ಬಾಳಿಕೆಯಿಂದ ಮುಕ್ತರಾಗಿ, ಸ್ವತಂತ್ರ ಮತ್ತು ಶಾಂತ ಇರಾನ್‌ ಸ್ಥಾಪಿಸುವ ಸಮಯ. ಎಲ್ಲರೂ ಒಗ್ಗೂಡಿ ಹೋರಾಡಬೇಕು’ ಎಂದ ನೆತನ್ಯಾಹು, ‘ಇದು ಖಮೇನಿ ಆಡಳಿತ ವಿರುದ್ಧದ ಯುದ್ಧವೇ ಹೊರತು ಇರಾನ್‌ ಜನತೆಯ ವಿರುದ್ಧವಲ್ಲ’ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.