ಟೋರೊಂಟೋ(ಏ.14): ಮಹತ್ವದ ಬೆಳವಣಿಗೆಯೊಂದರಲ್ಲಿ ಭಯೋತ್ಪಾದನಾ ಬೆದರಿಕೆಗಳ ಕುರಿತು ತಾನು ತಯಾರಿಸಿದ್ದ 2018ರ ವರದಿಯಿಂದ, ಸಿಖ್ ಹಾಗೂ ಖಲಿಸ್ತಾನಿ ಉಗ್ರವಾದದ ಪ್ರಸ್ತಾವನೆಗಳನ್ನು ಕೆನಡಾ ಸರ್ಕಾರ ತೆಗೆದು ಹಾಕಿದೆ.

2018 ರ ಕೆನಡಾದ ಭಯೋತ್ಪಾದನಾ ಹಾನಿಯ ಕುರಿತಾದ ಸಾರ್ವಜನಿಕ ವರದಿ'ಯಿಂದ ಸಿಖ್ ಉಗ್ರವಾದಿತ್ವ ಹಾಗೂ ಖಲಿಸ್ತಾನ ಉಗ್ರರ ಉಲ್ಲೇಖವನ್ನು ಕೆನಡಾ ಕೈಬಿಟ್ಟಿದೆ.

ಭಯೋತ್ಪಾದನಾ ಬೆದರಿಕೆಗಳ ಕುರಿತಾದ ಕೆನಡಾದ ವರದಿ ಅಲ್ಲಿನ ಸಿಖ್‌ರನ್ನು ಕೆರಳಿಸಿತ್ತು. ಅಲ್ಲದೇ ಈ ವರದಿಯನ್ನು ಹಿಂಪಡೆಯುವಂತೆ ಕೆನಡಾದ ಸಿಖ್ ಸಂಘಟನೆಗಳು ಒತ್ತಾಯಿಸಿದ್ದವು.

ಅದರಂತೆ ಸಿಖ್ ಸಮುದಾಯದ ಒತ್ತಡಕ್ಕೆ ಮಣಿದಿರುವ ಸರ್ಕಾರ, ವರದಿಯಿಂದ ಸಿಖ್ ಉಗ್ರಗಾಮಿತ್ವ ಮತ್ತು ಖಲಿಸ್ತಾನ್ ಪದಗಳನ್ನು ಅಳಿಸಿ ಹಾಕಿದೆ. ಆದರೆ 'ಭಾರತದೊಳಗೆ ಸ್ವತಂತ್ರ ರಾಜ್ಯ ಸ್ಥಾಪಿಸಲು ಹಿಂಸಾಚಾರ ಬೆಂಬಲಿಸುವ ಉಗ್ರರು' ಎಂಬ ಹೊಸ ಪದ ಸೇರಿಸಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.