ಕುಮಾರಸ್ವಾಮಿ 53 ಸಾವಿರ ಕೋಟಿ ಸಾಲ ಮನ್ನಾ ಮಾಡ್ತಾರಾ?

Can H D Kumaraswamy waive off farmers loan as assured before Karnataka Assembly Election
Highlights

ಚುನಾವಣೆಗೂ ಮುನ್ನ ಹೋದಲ್ಲಿ ಬಂದಲ್ಲಿ, ರೈತರ ಸಾಲ ಮನ್ನಾ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು. ಸರಕಾರ ಖಚಾನೆಯಲ್ಲಿ ಅಷ್ಟು ದೊಡ್ಡ ಮೊತ್ತದ ಹಣವೇ ಇಲ್ಲದಿರುವಾಗ ಎಚ್ಡಿಕೆ ಕೊಟ್ಟ ಮಾತನ್ನು ಈಡೇರಿಸುತ್ತಾರಾ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಅವರಿಂದಲೂ ಉತ್ತರ ಸಿಗುತ್ತಿಲ್ಲ.

ಬೆಂಗಳೂರು: ರಾಜ್ಯದ ಜನ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದರೆ ಪ್ರಮಾಣವಚನ ಸ್ವೀಕರಿಸಿದ 24 ಗಂಟೆಗಳಲ್ಲೇ ಸಾಲ ಮನ್ನಾ ಮಾಡೋದಾಗಿ ಎಚ್​.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ರಾಜ್ಯದ ಜನರು ಅವಕಾಶ ನೀಡಿದರೋ ಅಥವಾ ಕುಮಾರಸ್ವಾಮಿ ಅವರೇ ಅವಕಾಶ ಸೃಷ್ಟಿಸಿಕೊಂಡರೋ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದೀಗ ಕೊಟ್ಟ ಮಾತನ್ನು ಪಾಲಿಸುವ ಸಂಕಟದಲ್ಲಿ ಅವರಿದ್ದಾರೆ.

ಕೊಟ್ಟ ಮಾತು ಉಳಿಸಿಕೊಳ್ತಾರಾ ಕುಮಾರಸ್ವಾಮಿ..?

ರಾಷ್ಟ್ರೀಕೃತ ಬ್ಯಾಂಕ್​ಗಳು ಮತ್ತು ಸಹಕಾರ ಬ್ಯಾಂಕ್​ಗಳಲ್ಲಿ ರೈತರು ಮಾಡಿರುವ 53 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತೇವೆ ಅನ್ನೋದು ಜೆಡಿಎಸ್​ನ ಚುನಾವಣಾ ಘೋಷಣೆ. ಕುಮಾರಸ್ವಾಮಿ ಚುನಾವಣೆಗೂ ಮುನ್ನ ಇದೇ ಮಾತನ್ನು ಹೇಳುತ್ತಿದ್ದರು. ಜೆಡಿಎಸ್​ನ ಚುನಾವಣಾ ಪ್ರಣಾಳಿಕೆಯಲ್ಲಿಯೂ 53 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗುವುದೆಂಬುದದನ್ನು ಸ್ಪಷ್ಟಪಡಿಸಿದ್ದರು. ಈಗ ಹೇಳುವ ಕೆಲಸ ಮಾಡುವ ಸಮಯ ಬಂದಿದೆ. ಚುನಾವಣೆ ವೇಳೆ ಕೊಟ್ಟ ಮಾತನ್ನು ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೇರಿದ ನಂತರ ಉಳಿಸಿಕೊಳ್ತಾರಾ? ನೋಡಬೇಕು.

ಸಾಲ ಮನ್ನಾ ವಿಷಯ ಮಾತಾಡ್ತಿಲ್ಲ ಎಚ್​ಡಿಕೆ

ಚುನಾವಣೆ ವೇಳೆ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಕುಮಾರಸ್ವಾಮಿ ನಿಯೋಜಿತ ಮುಖ್ಯಮಂತ್ರಿ ಎಂದು ಘೋಷಣೆಯಾದ ನಂತರ ಇದುವರೆಗೂ ಸಾಲ ಮನ್ನಾ ವಿಚಾರವಾಗಿ ಚಕಾರವೆತ್ತಿಲ್ಲ. 

53 ಸಾವಿರ ಕೋಟಿಯಷ್ಟು ದೊಡ್ಡ ಮೊತ್ತದ ಸಾಲ ಮನ್ನಾ ಮಾಡಲು ಬೇಕಾದ ಆರ್ಥಿಕ ಬಲವೇ ರಾಜ್ಯದಲ್ಲಿಲ್ಲ. ಹಾಗಿರುವಾಗ ಎಚ್​ಡಿಕೆ ಭರವಸೆ ಈಡೇರುತ್ತಾ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. 8 ಸಾವಿರ ಕೋಟಿ  ರೂ.ರೈತರ ಸಾಲ ಮನ್ನಾ ಮಾಡಿದ್ದ ಸರ್ಕಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಹಕಾರಿ ಸಂಘಗಳಿಗೆ ಹಣ ಬಿಡುಗಡೆ ಮಾಡಿಲ್ಲ. 32 ಸಾವಿರ ಕೋಟಿ ರೂ. ಸಾಲ ಮನ್ನಾ ಘೋಷಿಸಿದ್ದ ಉತ್ತರ ಪ್ರದೇಶ ಸರ್ಕಾರ ಈವರೆಗೆ 7 ಸಾವಿರ ಕೋಟಿಯನ್ನಷ್ಟೇ ಸಾಲ ಮನ್ನಾ ಮಾಡಿ ಉಳಿದ ಸಾಲ ಮನ್ನಾ ಘೋಷಿಸಲು ಹೆಣಗಾಡುತ್ತಿದೆ. ಈ ಸಂದರ್ಭದಲ್ಲಿ 53 ಸಾವಿರ ಕೋಟಿ ಸಾಲ ಮನ್ನಾ ಘೋಷಣೆ ಮಾಡಿರುವ ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಳ್ತಾರಾ? 
 

loader