Asianet Suvarna News Asianet Suvarna News

ಶುರುವಾಗಿದೆ ಸಂಪುಟ ಸಂಕಟ! ಮಂತ್ರಿಗಳಾಗೋಕೆ ಶುರು ಪೈಪೋಟಿ!

ಮುಖ್ಯಮಂತ್ರಿಯಾಗಿ ಇನ್ನೂ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿಲ್ಲ. ಆಗಲೇ ಸಂಪುಟ ಸಂಕಟ ಆರಂಭವಾಗಿದೆ. ಡಿಸಿಎಂ ಪಟ್ಟಕ್ಕೇರಲು ಕಾಂಗ್ರೆಸ್​ನಲ್ಲಿ ಪೈಪೋಟಿ ಆರಂಭವಾಗಿದ್ದರೆ, ಮಂತ್ರಿ ಪದವಿ ಗಿಟ್ಟಿಸಲು ಎಲ್ಲ ಶಾಸಕರೂ ತಾ ಮುಂದು, ನಾ ಮುಂದು ಎಂದು ಸಾಲಿನಲ್ಲಿ ನಿಂತಿದ್ದಾರೆ. 

JDS Congress Government cabinet expansion is first challenge for H D Kumaraswamy

ಬೆಂಗಳೂರು: ಮುಖ್ಯಮಂತ್ರಿಯಾಗಿ ಇನ್ನೂ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿಲ್ಲ. ಆಗಲೇ ಸಂಪುಟ ಸಂಕಟ ಆರಂಭವಾಗಿದೆ. ಡಿಸಿಎಂ ಪಟ್ಟಕ್ಕೇರಲು ಕಾಂಗ್ರೆಸ್​ನಲ್ಲಿ ಪೈಪೋಟಿ ಆರಂಭವಾಗಿದ್ದರೆ, ಮಂತ್ರಿ ಪದವಿ ಗಿಟ್ಟಿಸಲು ಎಲ್ಲ ಶಾಸಕರೂ ತಾ ಮುಂದು, ನಾ ಮುಂದು ಎಂದು ಸಾಲಿನಲ್ಲಿ ನಿಂತಿದ್ದಾರೆ. 

ಶುರುವಾಗಿದೆ ಸಂಪುಟ ಸಂಕಟ..!

ಜಾತಿ ಸಮೀಕರಣ ಆಧರಿಸಿ ಮಂತ್ರಿಗಿರಿ ಹಂಚಲು ಉಭಯ ಪಕ್ಷಗಳು ನಿರ್ಧಿರಿಸಿವೆ. ಕಾಂಗ್ರೆಸ್​ಗೆ 18 ಹಾಗೂ ಜೆಡಿಎಸ್​ಗೆ 12 ಸಚಿವ ಸ್ಥಾನಗಳನ್ನು ಹಂಚಬೇಕೆಂದು ಪಕ್ಷಗಳು ಒಪ್ಪಿವೆ. ಸಚಿವರಾಗೋಕೆ ಕಾಂಗ್ರೆಸ್​ ಮತ್ತು ಜೆಡಿಎಸ್​ನಲ್ಲೇ ಭಾರೀ ಪೈಪೋಟಿ ನಡೆಯುತ್ತಿದ್ದು, ಖಾತೆ ಹಂಚಿಕೆಯೇ ಕುಮಾರಸ್ವಾಮಿ ಪಾಲಿಗೆ ಮೈತ್ರಿ ಸರ್ಕಾರದ ಮೊದಲ ಅಗ್ನಿ ಪರೀಕ್ಷೆಯಾಗಲಿದೆ.

ಕಾಂಗ್ರೆಸ್​ನಲ್ಲಿ ಶುರುವಾಯ್ತು ಡಿಸಿಎಂ ರೇಸ್..!


ಮೈತ್ರಿ ಸರ್ಕಾರದಲ್ಲಿ ಎಚ್​ಡಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಹುದ್ದೆ, ಕಾಂಗ್ರೆಸ್​ಗೆ ಉಪಮುಖ್ಯಮಂತ್ರಿ ಹುದ್ದೆ ಎನ್ನುವ ಒಪ್ಪಂದವಾಗಿದೆ. ಕಾಂಗ್ರೆಸ್‌ನಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗೆ ನಾಲ್ವರು ಆಕಾಂಕ್ಷಿಗಳಿದ್ದಾರೆ. ಜಿ.ಪರಮೇಶ್ವರ್ ಅವರಿಗೆ ದಲಿತ ಕೋಟಾದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಅಂತ ಹೇಳಿತ್ತಾದರೂ, ಈಗ ಶಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್​ ಮತ್ತು ಎಸ್​. ಆರ್. ಪಾಟೀಲ್​ ಕೂಡ ರೇಸ್​ನಲ್ಲಿದ್ದಾರೆ. 

ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅಪ್ಪಣೆ ಬೇಕಾ?

ಎಚ್.​ಡಿ. ಕುಮಾರಸ್ವಾಮಿ ಸಂಪುಟ ವಿಸ್ತರಣೆಗೆ ಕಾಂಗ್ರೆಸ್​ ಹೈಕಮಾಂಡ್​ನ ಅಪ್ಪಣೆ ಬೇಕಾ ಎಂಬ ಚರ್ಚೆಗಳೂ ನಡೆಯುತ್ತಿವೆ. 'ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಿರಿಯ ನಾಯಕರನ್ನು ಭೇಟಿ ಮಾಡೋಕೆ ದೆಹಲಿಗೆ ಹೋಗುತ್ತಿದ್ದೇನೆ. ಈ ವೇಳೆ  ಸೋನಿಯಾ-ರಾಹುಲ್ ಜೊತೆ ಮಾತನಾಡಿ ಸಂಪುಟ ವಿಸ್ತರಣೆ ಫೈನಲ್ ಮಾಡ್ತೀವಿ,' ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ, ಸಂಪುಟ ವಿಸ್ತರಣೆ ಬಗ್ಗೆ ಇಲ್ಲಿನ ಮುಖಂಡರೇ ನಿರ್ಧರಿಸುತ್ತೇವೆಂದು ಡಿ. ಕೆ ಶಿವಕುಮಾರ್ ಹೇಳಿದ್ದು ಸಂಪುಟ ಸಂಕಟ ಕಡಿಮೆಯಾಗುವಂತೆ ಎನಿಸುತ್ತಿಲ್ಲ.

ಮಾಯವತಿ ಭೇಟಿಯಾದ ಎಚ್ಡಿಕೆ
 

Follow Us:
Download App:
  • android
  • ios