ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಳ್ಗಿಚ್ಚು..! ರಕ್ಕಸ ಕಾಡ್ಗಿಚ್ಚಿಗೆ ಸತ್ತವರ ಸಂಖ್ಯೆ ಲೆಕ್ಕಕ್ಕಿಲ್ಲ ..! ಹಿಂದೆಂದು ಕಂಡು ಕೇಳರಿಯದ ಕಾಡ್ಗಿಚ್ಚು  ರಣಭೀಕರ ಬೆಂಕಿಗೆ ಮೂಖ ಪ್ರಾಣಿಗಳು ಮೌನ. ಧಗಧಗ ಉರಿಯುತ್ತಿರುವ ಬೆಂಕಿಗೆ ಸತ್ತವರ ಸಂಖ್ಯೆ ರಾಶಿ ರಾಶಿ..!

ಕ್ಯಾಲಿಫೋರ್ನಿಯಾ, [ನ.14]: ಉತ್ತರ ಕ್ಯಾಲಿಫೋರ್ನಿಯಾವು ಈವರೆಗೆ ಕಂಡು ಕೇಳರಿಯದ ಕಾಳ್ಗಿಚ್ಚಿನಿಂದ ತತ್ತರಿಸುತ್ತಿದ್ದು, ಬೆಂಕಿಯೆ ಕೆನ್ನಾಲಿಗೆಗೆ ಸಿಲುಕಿ ಸದ್ಯ ಸಿಕ್ಕ ಮಾಹಿತಿ ಪ್ರಕಾರ 44 ಮಂದಿ ಸುಟ್ಟು ಕರಕಲಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಕಿಯ ಕೆಣ್ಣಾಲಿಗೆಗೆ ನೂರಾರು ಮಂದಿ ಸಿಲುಕಿದ್ದಾರೆ ಅಂತ ಮೂಲಗಳು ತಿಳಿಸಿವೆ. ವ್ಯಾಪಕವಾಗಿ ಹರಡುತ್ತಿರುವ ಬೆಂಕಿಗೆ ನೂರಾರು ಮಂದಿ ಸಾವಿಗೀಡಾಗುವ ಸಾಧ್ಯತೆ ಇದೆ.

23 ಜನರನ್ನು ಬಲಿ ಪಡೆದ ಭೀಕರ ಕಾಳ್ಗಿಚ್ಚು: ಮನೆ ತೊರೆದ ಸೆಲಿಬ್ರಿಟಿಗಳು!

ಕಾರು, ಬಸ್, ಅಕ್ಕ ಪಕ್ಕದ ಗ್ರಾಮಗಳ ಜನರು, ಹಾಗೂ ನೂರಾರು ವನ್ಯ ಜೀವಿಗಳು ಬೆಂಕಿಯ ಕೆಣ್ಣಾಲಿಗೆಗೆ ತುತ್ತಾಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿವೆ. 

ಬೆಂಕಿ ಹತ್ತಿದ ಬಹುತೇಕ ಕಡೆಗಳಲ್ಲಿ ಪ್ರಾಣಿ ಹಾಗೂ ಮನುಷ್ಯರ ಮೂಳೆಗಳಷ್ಟೇ ಕಾಣಸಿಗುತ್ತಿವೆ. ಅಗ್ನಿ ಅನಾಹುತದಲ್ಲಿ ಹೆಣಗಳ ರಾಶಿಯೇ ಬೀಳುತ್ತಿದ್ದು, ಮೃತಪಟ್ಟವರ ಪತ್ತೆಗಾಗಿ ಮೊಬೈಲ್ ಡಿಎನ್ಎ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ.