ಎಂದೂ ಕಂಡು ಕೇಳರಿಯದ ಭೀಕರ ಕಾಳ್ಗಿಚ್ಚು! ಭೀಕರ ಕಾಳ್ಗಿಚ್ಚಿಗೆ 23 ಜನ ಜೀವಂತ ದಹನ! ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಳ್ಗಿಚ್ಚು! ಉತ್ತರ ಕ್ಯಾಲಿಫೋರ್ನಿಯಾದ ಪರ್ವತ ನಗರಿ ಪ್ಯಾರಡೈಸ್!ಕಾಳ್ಗಿಚ್ಚಿಗೆ ಮನೆ ತೊರೆದ ಹಾಲಿವುಡ್ ಸೆಲಿಬ್ರಿಟಿಗಳು

ಕ್ಯಾಲಿಫೋರ್ನಿಯಾ(ನ.11): ಅಮೆರಿಕ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಕಂಡು ಕೇಳರಿಯದ ಕಾಳ್ಗಿಚ್ಚಿಗೆ ಇದುವರೆಗೆ 23 ಮಂದಿ ಬಲಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕ್ಯಾಲಿಫೋರ್ನಿಯಾದ ಪರ್ವತ ನಗರಿ ಪ್ಯಾರಡೈಸ್ ನಲ್ಲಿ ಕಳೆದೆರಡು ದಿನಗಳಿಂದ ಭೀಕರ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು ಬಲವಾಗಿ ಬೀಸುವ ಗಾಳಿಯ ಕಾರಣ ಬೆಂಕಿಯ ಕೆನ್ನಾಲಿಗೆಗಳು ಅತಿ ವೇಗವಾಗಿ ಪಸರಿಸಿದೆ.

ಇದುವರೆಗೆ ವಿನಾಶಕಾರಿ ಕಾಳ್ಗಿಚ್ಚಿಗೆ ಸಿಕ್ಕಿದ 23 ಜನರ ದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾದ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೇ ಕಾಳ್ಗಿಚ್ಚಿಗೆ ಅಪಾರ ಪ್ರಮಾಣದ ಕಾಡು ಸುಟ್ಟು ಭಸ್ಮವಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಇದರ ಸಮೀಪದಲ್ಲೇ ಹಾಲಿವುಡ್ ಇದ್ದು, ಟಾಪ್ ಸೆಲಿಬ್ರಿಟಿಗಳೆಲ್ಲಾ ಮನೆ ತೊರೆದು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.