ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಗಣೇಶ ಹಬ್ಬದ ನಂತರಕ್ಕೆ ಮುಂದೂಡಿಕೆಯಾಗುವ ಲಕ್ಷಣಗಳಿವೆ. ಮೂಲಗಳ ಪ್ರಕಾರ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಮುಕ್ತ ಅವಕಾಶವನ್ನು ಸಿಎಂ ಸಿದ್ದರಾಮಯ್ಯಗೆ ನೀಡಿದೆ. ಸಿದ್ದರಾಮಯ್ಯ ಅವರು ಸೂಚಿಸಿರುವ ಹೆಸರುಗಳಿಗೆ ಕುರುಬರ ಕೋಟಾದಲ್ಲಿ ಎಚ್.ಎಂ. ರೇವಣ್ಣ, ಲಿಂಗಾಯತರ ಕೋಟಾದಲ್ಲಿ ಕೆ. ಷಡಕ್ಷರಿ ಹಾಗೂ ಪರಿಶಿಷ್ಟರ ಕೋಟಾದಲ್ಲಿ ತಿಮ್ಮಾಪುರ ಹೆಸರಿಗೆ ಸಮ್ಮತಿ ನೀಡಿದೆ. ಆದರೆ, ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗದಿರಲು ಕಾರಣ ಪರಿಶಿಷ್ಟರ ಕೋಟಾದಲ್ಲಿ ಸಚಿವ ಸ್ಥಾನಕ್ಕಾಗಿ ಎಡ-ಬಲ ಪಂಗಡಗಳ ನಡುವೆ ನಡೆದಿರುವ ಪೈಪೋಟಿ ಎಂದು ಹೇಳಲಾಗ್ತಿದೆ.

ಬೆಂಗಳೂರು: ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಗಣೇಶ ಹಬ್ಬದ ನಂತರಕ್ಕೆ ಮುಂದೂಡಿಕೆಯಾಗುವ ಲಕ್ಷಣಗಳಿವೆ. ಮೂಲಗಳ ಪ್ರಕಾರ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಮುಕ್ತ ಅವಕಾಶವನ್ನು ಸಿಎಂ ಸಿದ್ದರಾಮಯ್ಯಗೆ ನೀಡಿದೆ.

Add Asianetnews Kannada as a Preferred SourcegooglePreferred

ಸಿದ್ದರಾಮಯ್ಯ ಅವರು ಸೂಚಿಸಿರುವ ಹೆಸರುಗಳಿಗೆ ಕುರುಬರ ಕೋಟಾದಲ್ಲಿ ಎಚ್.ಎಂ. ರೇವಣ್ಣ, ಲಿಂಗಾಯತರ ಕೋಟಾದಲ್ಲಿ ಕೆ. ಷಡಕ್ಷರಿ ಹಾಗೂ ಪರಿಶಿಷ್ಟರ ಕೋಟಾದಲ್ಲಿ ತಿಮ್ಮಾಪುರ ಹೆಸರಿಗೆ ಸಮ್ಮತಿ ನೀಡಿದೆ.

ಆದರೆ, ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗದಿರಲು ಕಾರಣ ಪರಿಶಿಷ್ಟರ ಕೋಟಾದಲ್ಲಿ ಸಚಿವ ಸ್ಥಾನಕ್ಕಾಗಿ ಎಡ-ಬಲ ಪಂಗಡಗಳ ನಡುವೆ ನಡೆದಿರುವ ಪೈಪೋಟಿ ಎಂದು ಹೇಳಲಾಗ್ತಿದೆ.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಪರಿಶಿಷ್ಟರ ಎಡಗೈ ಪಂಗಡದವರು, ಎಡಗೈ ಪಂಗಡಕ್ಕೆ ದೊರೆಯಬೇಕು ಎಂದು ಪ್ರಬಲ ಲಾಬಿ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನು ಬಲಗೈ ಪಂಗಡದಿಂದ ಮೋಟಮ್ಮ ಹಾಗೂ ನರೇಂದ್ರಸ್ವಾಮಿ ಅವರು ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಸಿಎಂ ಎಡಗೈಗೆ ಈ ಸ್ಥಾನವನ್ನು ನೀಡಿದರೆ, ಅದು ಸಹಜವಾಗಿಯೇ ಬಲಗೈ ಪಂಗಡದ ಬೇಸರಕ್ಕೆ ಕಾರಣವಾಗುತ್ತದೆ.

ಈ ವಿಚಾರ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಾಗಿದೆ. ಹೀಗಾಗಿ ಪರಿಶಿಷ್ಟರ ಎಡಗೈ-ಬಲಗೈ ಪೈಕಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ತಲೆನೋವಾಗಿದೆ. ಬಹುತೇಕ ಗಣೇಶ ಹಬ್ಬದ ನಂತರ ಅಂದರೆ ಮುಂದಿನ ವಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.