ಶಾಸಕ ರಾಘವೇಂದ್ರ ಅವರು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದಾಗ ಅವರ KA 50 M 6646 ಸಂಖ್ಯೆಯ ಕಾರು ಡಿಕ್ಕಿ ಹೊಡೆದಿದೆ.
ಹೊನ್ನಾಳಿ(ಆ.31): ಬಿಎಸ್'ವೈ ಪುತ್ರ ಶಾಸಕ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು ಬೈಕ್'ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊನ್ನಾಳಿ ತಾ. ಮಾದಾಪುರ ಕ್ರಾಸ್ ಬಳಿ ನಡೆದಿದೆ.
ಸುರೇಶ್(24) ಮೃತ ಸವಾರ. ಶಾಸಕ ರಾಘವೇಂದ್ರ ಅವರು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದಾಗ ಅವರ KA 50 M 6646 ಸಂಖ್ಯೆಯ ಕಾರು ಡಿಕ್ಕಿ ಹೊಡೆದಿದೆ. ಘಟನೆ ನಡೆದ ನಂತರ ಸ್ಥಳೀಯರು ರಾಘವೇಂದ್ರ ಅವರನ್ನು ತರಾಟೆಗೆ ತೆಗುದು ಕೊಂಡಿದ್ದರು. ದಾವಣಗೆರೆಯ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
