ಬುರಾರಿ ಫ್ಯಾಮಿಲಿಯ ಕೊನೆ ಸದಸ್ಯನಿಗೂ ಸಾವು ಬಂತು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jul 2018, 9:53 PM IST
Burari family pet dog  Tommy dies of cardiac arrest at Noida shelter
Highlights

ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದ ದೆಹಲಿಯ ಬುರಾರಿ ಕುಟುಂಬದಲ್ಲಿ ಬದುಕುಳಿದ್ದಿದ್ದ ಇನ್ನೊಬ್ಬ ವ್ಯಕ್ತಿಯೂ ಸಾವನ್ನಪ್ಪಿದ್ದಾನೆ. ಇಡೀ ದುರಂತಕ್ಕೆ ಸಾಕ್ಷಿ ಎಂಬಂತೆ ಇದ್ದ ಸಾಕು ನಾಯಿಯೂ ಹೃದಯ ಸ್ತಂಭನದಿಂದ ನಿಧನವಾಗಿದೆ.

ನವದೆಹಲಿ[ಜು.23]  ಕುಟುಂಬದ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡ ನಂತರ ಸಾಕು ನಾಯಿ ಟಾಮಿಯನ್ನು ಪ್ರಾಣಿಹಕ್ಕುಗಳ ಕಾರ್ಯಕರ್ತರೊಬ್ಬರು ಪಡೆದುಕೊಂಡಿದ್ದರು. ಆರೋಗ್ಯದಲ್ಲಿ ಚೇತರಿಕೆ ಇದೆ ಎಂದು ಹೇಳಿದ್ದರು. ಆದರೆ ಕೆವಲೇ ದಿನದಲ್ಲಿ ನಾಯಿ ಸಹ ಇಹಲೋಕ ತ್ಯಜಿಸಿದೆ.

ಭಾಟಿಯಾ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ನಂತರ ಟಾಮಿಯನ್ನು ಮಾಧ್ಯಮಗಳಲ್ಲಿ ನೋಡಿದ ಸಂಜಯ್​ ಮೋಹಪಾತ್ರ  ಎಂಬುವರು ಟಾಮಿಯನ್ನು ನೋಡಿಕೊಳ್ಳುವುದರ ಕುರಿತು ಪೊಲೀಸರನ್ನು ಸಂಪರ್ಕಿಸಿ ತಮ್ಮ ಕೇರ್​ ಸೆಂಟರ್​ಗೆ ಕರೆದೊಯ್ದಿದ್ದರು. ಮೊದಲ ಬಾರಿ ಕೇರ್​ ಸೆಂಟರ್​ಗೆ ಕರೆದುಕೊಂಡು ಬಂದಾಗ ಟಾಮಿಗೆ 108 ಡಿಗ್ರಿ ಜ್ವರವಿತ್ತು. ತುಂಬಾ ಆಕ್ರಮಣಕಾರಿಯಾಗಿದ್ದ ಟಾಮಿ ಯಾರೇ ಹತ್ತಿರ ಹೋದರೂ ಕಚ್ಚಲು ಬರುತ್ತಿತ್ತು. ಆದರೆ ನಿಧಾನವಾಗಿ ಚೇತರಿಸಿಕೊಂಡಿತ್ತು.

11 ಜನರ ಆತ್ಮಹತ್ಯೆ ಬಗ್ಗೆ ಬಯಲಾಯ್ತು ಬೆಚ್ಚಿ ಬೀಳಿಸುವ ಸಂಗತಿ..!

ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಈ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಒಂದು ವೇಳೆ ಕಟ್ಟಿ ಹಾಕದಿದ್ದರೆ ಕುಟುಂಬದವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಅಡ್ಡ ನಿಲ್ಲುವ ಸಾಧ್ಯೆತೆಯೂ ಇತ್ತು ಎನ್ನಲಾಗಿದೆ.

 

loader