11 ಜನರ ಆತ್ಮಹತ್ಯೆ ಬಗ್ಗೆ ಬಯಲಾಯ್ತು ಬೆಚ್ಚಿ ಬೀಳಿಸುವ ಸಂಗತಿ..!

Delhi Mass Suicide Confirmed To Be A Result Of Superstition
Highlights

11 ಜನರ ಆತ್ಮಹತ್ಯೆ ಬಗ್ಗೆ ಇದೀಗ ಬೆಚ್ಚಿ ಬೀಳಿಸುವ ಭಯಾನಕವಾದ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಆತ್ಮಹತ್ಯೆ ಹಿಂದೆ ಇದೀಗ ಮಾಟಗಾತಿಯೊಬ್ಬಳ ನಂಟಿನ ಶಂಕೆ ವ್ಯಕ್ತವಾಗಿದೆ.

ನವದೆಹಲಿ: ಇಲ್ಲಿನ ಬುರಾರಿ ಪ್ರದೇಶದಲ್ಲಿ ನಡೆದ 11 ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಮಾಟಗಾತಿಯೊಬ್ಬಳ ನಂಟಿನ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗೀತಾ ಮಾ ಎಂಬ ಮಹಿಳೆಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ಕುಟುಂಬ ವಾಸಿಸುತ್ತಿದ್ದ ಮನೆಯನ್ನು ನಿರ್ಮಿಸಿದ್ದ ಗುತ್ತಿಗೆದಾರನ ಮಗಳೇ ಈ ಮಾಟಗಾತಿ. ಮನೆಗೆ ವಿಚಿತ್ರ ರೀತಿಯಲ್ಲಿ 11 ಪೈಪ್‌ಗಳನ್ನು ಅಳವಡಿಸಿದ್ದು, ಈಕೆಯ ಸಲಹೆ ಮೇರೆಗಾ? ಈಕೆಯ ಸಲಹೆ ಮೇರೆಗೇ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿತಾ? ಕುಟುಂಬ ಸದಸ್ಯರ ನಡವಳಿಕೆ ಬಗ್ಗೆ ಆಕೆಗೆ ಇನ್ನೇನು ಮಾಹಿತಿ ಇರಬಹುದು ಎಂಬುದನ್ನು ಅರಿಯಲು ಆಕೆಯನ್ನು ವಶಕ್ಕೆ ಪಡೆಯಲಾಗಿದೆ.

ಕುಟುಂಬ ಸದಸ್ಯರ ಫೋನ್‌ ಕರೆಯ ತಪಾಸಣೆ ಮಾಡಿದಾಗ ಕಡೆಯ ಕರೆ ಈ ಮಾಟಗಾತಿಗೆ ಹೋಗಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಪ್ರಾಥಮಿಕ ವಿಚಾರಣೆ ವೇಳೆ, ನನಗೆ ಕುಟುಂಬ ಸದಸ್ಯರು ನೇರವಾಗಿ ಗೊತ್ತಿಲ್ಲ. ಕೇವಲ ತಂದೆಯಿಂದ ಅವರ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೆ. ಆತ್ಮಹತ್ಯೆಗೆ ಶರಣಾದ ಕುಟುಂಬ ಸದಸ್ಯರು ಒಂದೆರಡು ದಿನಗಳಲ್ಲಿಯೇ ನನ್ನನ್ನು ಭೇಟಿ ಮಾಟದ ಬಗ್ಗೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಆದರೆ ಅಷ್ಟರಲ್ಲೇ ಆತ್ಮಹತ್ಯೆಗೆ ಶರಣಾದರು ಎಂದು ಆಕೆ ತಿಳಿಸಿದ್ದಾಳೆ.

loader