ಕನ್ನಡದ ಹಾಸ್ಯ ನಟ,ಬಿಜೆಪಿಯ ಸಕ್ರಿಯ ಕಾರ್ಯಕರ್ತ ಬುಲೆಟ್ ಪ್ರಕಾಶ್ ರಾಂಗ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.  

ಬೆಂಗಳೂರು (ಆ.25): ಕನ್ನಡದ ಹಾಸ್ಯ ನಟ,ಬಿಜೆಪಿಯ ಸಕ್ರಿಯ ಕಾರ್ಯಕರ್ತ ಬುಲೆಟ್ ಪ್ರಕಾಶ್ ರಾಂಗ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಮೀನಿನ ಊಟ ಮಾಡಿ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದರು. ಇದಕ್ಕೆ ಭಾರೀ ಟೀಕೆಗಳೇ ವ್ಯಕ್ತವಾಗಿವೆ. ನಂತರ ಸಿಎಂ ತಮ್ಮ ನಡೆಯ ಬಗ್ಗೆ ಸ್ಪಷ್ಟನೆ ಕೂಡಾ ಕೊಟ್ಟಿದ್ದಾರೆ. ಈಗ ನಟ ಬುಲೆಟ್ ಪ್ರಕಾಶ್ ಕೂಡ ಸಿಎಂ ಮಾತಿಗೆ ಸಿಎಂ ನಡೆಗೆ ಕಠುವಾಗಿಯೇ ಟೀಕಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೇ. ಈ ಕಾಲದಲ್ಲಿ ಹಾಲು ಕುಡಿಯೋ ಮಕ್ಕಳೇ ಬದುಕೋದಿಲ್ಲ. ಇನ್ನು ವಿಷ ಕುಡಿಯೋ ಮಕ್ಕಳು ಬದುಕ್ತಾವಾ? ಮೀನು ತಿಂದು ಧರ್ಮ ಸ್ಥಳಕ್ಕೆ ಹೋಗ್ತೀರಿ. ನೀವೂ ಮಾಡಿದ್ದು ಸರೀನಾ? ಜನರ ಹಾದಿ ತಪ್ಪಿಸ್ತಿರಾ ನೀವು. ಅಲ್ಲದೆ ಸಮರ್ಥನೇ ಬೇರೆ. ಬೇಡರ ಕಣ್ಣಪ್ಪ ಜಿಂಕೆ ಮಾಂಸವನ್ನ ನೈವೆದ್ಯಕ್ಕೆ ಇಟ್ಟು ಕಣ್ಣು ಕೊಟ್ಟ ಅಂತೆಲ್ಲಾ ಹೇಳುವ ನೀವೂ ಕಣ್ಣು ಕೊಡಿ ನೋಡೋಣ ಎಂದು ಬುಲೆಟ್ ಪ್ರಕಾಶ್ ತಮ್ಮದೇ ಕಾಮಿಡಿ ಶೈಲಿಯಲ್ಲಿ ಟೀಕಾಪ್ರಹಾರ ಮಾಡಿದ್ದಾರೆ.