ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿನ್ನೆ ಯಡಿಯೂರಪ್ಪನವರೇ ಬಿಜೆಪಿಯ ಸಿಎಂ ಅಭ್ಯರ್ಥಿ ಅಂತ ಪುನರುಚ್ಚಾರ ಮಾಡಿರೋದು ತಮ್ಮ ಮೇಲೆ ಅವರಿಟ್ಟಿರುವ ವಿಶ್ವಾಸವನ್ನು ತೋರಿಸುತ್ತೆ.
ಬೆಂಗಳೂರು(ಮೇ.27): 'ನನಗೀಗ ಎಪ್ಪತ್ಮೂರು ವರ್ಷ ತುಂಬಿ ಎಪ್ಪತ್ನಾಲ್ಕಕ್ಕೆ ಕಾಲಿಟ್ಟಿದ್ದೇನೆ, ನಮ್ಮ ಸರ್ಕಾರ ರಚಿಸುವ ವೇಳೆಗೆ 75ನೇ ವರ್ಷಕ್ಕೆ ಕಾಲಿಟ್ಟಿರುತ್ತೇನೆ. ಹೀಗಾಗಿ 75 ವರ್ಷದ ಗಡವು ನನಗೆ ಅನ್ವಯವಾಗಲ್ಲ. ಈ ಮಾತು ಹೇಳಿದ್ದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ.ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿಂದು ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿನ್ನೆ ಯಡಿಯೂರಪ್ಪನವರೇ ಬಿಜೆಪಿಯ ಸಿಎಂ ಅಭ್ಯರ್ಥಿ ಅಂತ ಪುನರುಚ್ಚಾರ ಮಾಡಿರೋದು ತಮ್ಮ ಮೇಲೆ ಅವರಿಟ್ಟಿರುವ ವಿಶ್ವಾಸವನ್ನು ತೋರಿಸುತ್ತೆ.
ಆ ವಿಶ್ವಾಸವನ್ನ ಉಳಿಸಿಕೊಳ್ಳುತ್ತೇನೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯನವರನ್ನ ತರಾಟೆಗೆ ತೆಗೆದುಕೊಂಡ ಬಿಎಸ್'ವೈ. ಈ ದರಿದ್ರ ಸರ್ಕಾರಕ್ಕೆ ಹಸುಗಳಿಗೆ ಮೇವು ನೀಡುವ ಯೋಗ್ಯತೆಯೂ ಇಲ್ಲ. ಸಿಎಂ ಅವರ ಕಿವಿಹಿಂಡಿ ರೈತರ ಸಾಲ ಮನ್ನಾ ಮಾಡಿಸುತ್ತೇನೆ. ಜುಲೈ ಅಂತ್ಯದೊಳಗೆ ಸಾಲ ಮನ್ನಾ ಮಾಡದಿದ್ದರೆ, ನಾಲ್ಕೈದು ಲಕ್ಷ ರೈತರ ಸೇರಿಸಿ ಬೃಹತ್ ಪ್ರತಿಭಟನೆ ನಡೆಸೋದಾಗಿ ಎಚ್ಚರಿಸಿದರು.
