. ನಿನ್ನೆ ದಲಿತರ ಮನೆಯಲ್ಲಿ  ಹೊಟೇಲ್​ನಿಂದ ತರಿಸಿ ಯಡಿಯೂರಪ್ಪ ಟಿಫಿನ್ ಸೇವನೆ ಆರೋಪ ಗಂಭೀರ ಸ್ವರೂಪಕ್ಕೆ ತಿರುಗಿದೆ. ಆದರೆ, ಬಿಜೆಪಿ ಮುಖಂಡರು ಮಾತ್ರ ದಲಿತರ ಮನೆಯಲ್ಲೇ ಉಪಹಾರ ಮಾಡಲಾಗಿದೆ ಅಂತ ಹೇಳಿಕೊಂಡ್ರು.

ಚಿತ್ರದುರ್ಗ(ಮೇ.19): ಬರ ಪ್ರವಾಸದ ಎರಡನೇ ದಿನ ಚಿತ್ರದುರ್ಗ ಜಿಲ್ಲೆ ಯ ಹಲವೆಡೆ ನಡೆಯಿತು. ಮೊದಲ ದಿನವಿದ್ದ ಆರ್ಭಟ ಎರಡನೇ ದಿನ ಇರ್ಲಿಲ್ಲ. ಆದ್ರೆ, ನಿನ್ನೆ ತುಮಕೂರಿನ ದಲಿತರ ಮನೆಯ ಭೋಜನ ಸಖತ್ ಸದ್ದು ಮಾಡಿದೆ. ಹೋಟೆಲ್​ನಿಂದ ತಂದಿದ್ದ ಇಡ್ಲಿಯನ್ನ ದಲಿತರ ಮನೆಯಲ್ಲಿ ಸೇವಿಸಿ ಕಮಲಪಡೆ ಮೋಸ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತುಮಕೂರಿಲ್ಲಿ ನಿನ್ನೆ 30ಕ್ಕೂ ಹೆಚ್ಚು ಬಿಜೆಪಿ ನಾಯಕರ ದಂಡು ಇವತ್ತು ಚಿತ್ರದುರ್ಗದಲ್ಲಿ ಕೇವಲ ಮೂರ್ನಾಲ್ಕಕ್ಕೆ ಇಳಿದಿತ್ತು. ನಿನ್ನೆ ದಲಿತರ ಮನೆಯಲ್ಲಿ ಹೊಟೇಲ್​ನಿಂದ ತರಿಸಿ ಯಡಿಯೂರಪ್ಪ ಟಿಫಿನ್ ಸೇವನೆ ಆರೋಪ ಗಂಭೀರ ಸ್ವರೂಪಕ್ಕೆ ತಿರುಗಿದೆ. ಆದರೆ, ಬಿಜೆಪಿ ಮುಖಂಡರು ಮಾತ್ರ ದಲಿತರ ಮನೆಯಲ್ಲೇ ಉಪಹಾರ ಮಾಡಲಾಗಿದೆ ಅಂತ ಹೇಳಿಕೊಂಡ್ರು.

ಮಾಗಡಿಯಲ್ಲಿ ಮಾತಾಡಿದ ಎಚ್​.ಡಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರು ಇಂತಹ ಕೀಳು ಅಭಿರುಚಿ ಕೈಬಿಡಬೇಕು ಅಂತ ಮನವಿ ಮಾಡಿದರು. ಇತ್ತ ಕಾಂಗ್ರೆಸ್ ಪಕ್ಷದ SC-ST ಸೆಲ್​​ ಅಧ್ಯಕ್ಷ ಎಚ್ ಅಂಜಿನಪ್ಪ ಕೂಡಾ ದಲಿತರ ಮನೆಯಲ್ಲಿ ಹೋಟೆಲ್ ತಿಂಡಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೆ ಈಗಿನಿಂದಲೇ ಬಿಜೆಪಿ ಕಸರತ್ತು ಮಾಡಿದೆ. ಆದರೆ, ಬರ ಅಧ್ಯಯನ ಜನಸಂಪರ್ಕ ಹೆಸರಲ್ಲಿ ದಲಿತರ ಓಲೈಕೆಗೆ ಮುಂದಾಗಿ ಎಡವಟ್ಟು ಮಾಡಕೊಂಡಿದೆ.