ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ರಾಜಕೀಯದಲ್ಲಿ ಕಪ್ಪ-ಕಾಣಿಕೆ ಕೊಡೋದು ಬಿಡೋದು ಕಾಮನ್ ಅಂತಾ ಹೇಳ್ತಾರೆ. ಆದರೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅದು ಸಾವಿರ ಕೋಟಿ ಆರೋಪ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ಸರಿಯಾಗೇ ಪ್ರತಿ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಈಗ ಕಪ್ಪ-ಕಾಣಿಕೆಯ ಕದನ ಶುರುವಾಗಿದೆ. ಸಿಎಂ ಸಿದ್ದರಾಮಯ್ಯನವರು ಅವರ ಆಪ್ತ ಗೋವಿಂದರಾಜು ಮೂಲಕ ಕೇಂದ್ರದಲ್ಲಿರೋ ಕಾಂಗ್ರೆಸ್​ ಮುಖಂಡರಿಗೆ ಸುಮಾರು ಸಾವಿರ ಕೋಟಿ ರೂಪಾಯಿಯನ್ನು ಕೊಟ್ಟಿದ್ದಾರೆ ಅನ್ನೋದು ಯಡಿಯೂರಪ್ಪ ಸವಾಲು. ಇದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲವಾಗಿ ಸಾಬೀತುಪಡಿಸಿ ಇಲ್ಲವೇ ರಾಜಕೀಯ ಸನ್ಯಾಸ ಪಡೆದುಕೊಳ್ಳಿ ಅನ್ನೋ ಸವಾಲನ್ನು ಹಾಕಿದ್ದಾರೆ. ಜೊತೆಗೆ ಕೆಲವು ಕಾಂಗ್ರೆಸ್ ಮುಖಂಡರು ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ.

ಯಡಿಯೂರಪ್ಪನವರ ಆರೋಪದಲ್ಲಿ ಎಷ್ಟು ಹುರುಳಿದೆಯೋ ಗೊತ್ತಿಲ್ಲ. ಆದ್ರೆ ಈ 1000 ಕೋಟಿ ರೂಪಾಯಿ ಕಪ್ಪ ಕಾಣಿಕೆ ಆರೋಪ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡ್ತಿದೆ.