ವಿಕಾಸಪರ್ವ ಸಮಾವೇಶದಲ್ಲಿ ಮಾಯವತಿ ಭಾಗಿ; ರಾಷ್ಟ್ರೀಯ ಪಕ್ಷಗಳಿಗೂ ಮುಂಚೆಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಜೆಡಿಎಸ್ ಕಸರತ್ತು

BSP Supremo Mayavathi Participate in Vikasa Parva
Highlights

ಯಲಹಂಕ ಬಳಿ ಆಯೋಜಿಸಲಾಗಿರುವ ಜೆಡಿಎಸ್ ವಿಕಾಸಪರ್ವ ಸಮಾವೇಶದಲ್ಲಿ  ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಭಾಗಿಯಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೂ ಮುಂಚೆಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಜೆಡಿಎಸ್ ಕಸರತ್ತು ನಡೆಸುತ್ತಿದೆ.  

ಬೆಂಗಳೂರು (ಫೆ.17): ಯಲಹಂಕ ಬಳಿ ಆಯೋಜಿಸಲಾಗಿರುವ ಜೆಡಿಎಸ್ ವಿಕಾಸಪರ್ವ ಸಮಾವೇಶದಲ್ಲಿ  ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಭಾಗಿಯಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೂ ಮುಂಚೆಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಜೆಡಿಎಸ್ ಕಸರತ್ತು ನಡೆಸುತ್ತಿದೆ.  

ಸಮಾವೇಶಕ್ಕೆ  ಸುಮಾರು 8 ಲಕ್ಷ ಜನ ಸೇರುವ ನಿರೀಕ್ಷೆಯಿದೆ.  ಒಟ್ಟು 9 ಕಡೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.  ಸುಮಾರು 2 ಲಕ್ಷ ಆಸನಗಳನ್ನ ಹಾಕಲಾಗಿದೆ. 12 ಕ್ಕೂ ಹೆಚ್ಚು ಎಲ್’ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.  15 ಕಡೆಗಳಲ್ಲಿ ಕುಡಿಯುವ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.   ಹತ್ತು ಕಡೆಗಳಲ್ಲಿ ಊಟದ ವ್ಯವಸ್ಥೆ ಒಟ್ಟೂ ಮೂನ್ನೂರಕ್ಕೂ ಹೆಚ್ಚು ಕೌಂಟರ್ ತೆಗೆಯಲಾಗಿದೆ.  80*50 ಅಡಿ ವಿಸ್ತೀರ್ಣದಲ್ಲಿ ವೇದಿಕೆ ನಿರ್ಮಾಣವಾಗಿದೆ.  

ಅಭ್ಯರ್ಥಿಗಳ ಹೊರತುಪಡಿಸಿ, ಗಣ್ಯರಿಗೆ ವೇದಿಕೆಯಲ್ಲಿ  15 ಆಸನಗಳನ್ನ ಹಾಕಲಾಗಿದೆ.  ಜೆಡಿಎಸ್’ನ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಕೊನೆ ಕ್ಷಣದ ಕಸರತ್ತು ನಡೆಯುತ್ತಿದೆ.  ಜೆಡಿಎಸ್ ವಿಕಾಸಪರ್ವಕ್ಕೆ  ಲಕ್ಷಾಂತರ ಜನ ಸೇರುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಮಾಡಲಾಗಿದೆ.  15 ಜನ ಎಸಿಪಿ, 30 ಇನ್ಸ್ಪೆಕ್ಟರ್. 50 ಸಬ್'ಇನ್ಸ್'ಪೆಕ್ಟರ್, 1500 ಕಾನ್ಸ್'ಟೇಬಲ್, 3 ಸಾವಿರ ಹೋಮ್ ಗಾರ್ಡ್’ಗಳನ್ನು ನಿಯೋಜನೆ ಮಾಡಲಾಗಿದೆ. 
 

loader