ಮಂಡ್ಯ [ಜು.29]:  ಅತೃಪ್ತ ಶಾಸಕರನ್ನು ಅನರ್ಹ ಮಾಡುವ ಮುನ್ನ ಹಳೆಯ ರಾಜೀನಾಮೆ ಪ್ರಕರಣಗಳನ್ನು ಅಧ್ಯಯನ ಮಾಡಬೇಕಿತ್ತು ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಚೆಲುವರಾಯ ಸ್ವಾಮಿ ಹೇಳಿದರು. 

ನಾಗಮಂಗಲದಲ್ಲಿ ಮಾತನಾಡಿದ ಚಲುವರಾಯಸ್ವಾಮಿ ರಾಜ್ಯದಲ್ಲಿ ನಡೆಯುತ್ತಿರುವ ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. 
ಆಪರೇಷನ್ ಕಮಲಕ್ಕಿಂತ, ಸರ್ಕಾರದ ಆಡಳಿತದ ಬಗ್ಗೆಯೂ ಅವರು ಅಸಮಾಧಾನಗೊಂಡಿದ್ದಾರೆ. ಆದರೆ ಆಪರೇಷನ್ ಕಮಲದ ಪ್ರಭಾವವೂ ಕೊಂಚ ಇರಲೂ ಬಹುದು. ಆದರೆ ಅದು ಪ್ರಮುಖ ಅಲ್ಲ ಎಂದರು.   

ಮೂರು ದಿನ ಗಡುವು ಕೊಟ್ಟು ಮುಖ್ಯಮಂತ್ರಿ BSY ವಾರ್ನಿಂಗ್

ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿರುವುದರಿಂದ ಕಿತ್ತಾಟ ಬಂದಿರುವುದಲ್ಲ.  ಕಿತ್ತಾಟಕ್ಕೆ ಕಾರಣವಾಗಿದ್ದು, ಮೈತ್ರಿ ಸರ್ಕಾರ. ಇದರಿಂದ ಅಸಮಾಧಾನಗೊಂಡು ಹೋದ  17 ಶಾಸಕರನ್ನು ಅನರ್ಹ ಮಾಡಲಾಗಿದೆ. ಇದರಿಂದ ಸದನದ ಸಂಖ್ಯಾ ಬಲವೂ ಕುಸಿದಿದೆ ಎಂದು ಚೆಲುವರಾಯ ಸ್ವಾಮಿ ಅಸಮಾಧಾನ ಹೊರ ಹಾಕಿದರು. 

BSY ವಿಶ್ವಾಸ ಗೆಲ್ತಾರಾ? ಇಲ್ಲಿದೆ ಅಂಕಿ ಅಂಶಗಳ ಫುಲ್ ಡಿಟೇಲ್ಸ್

ಬಿಜೆಪಿ 100 ಪರ್ಸೆಂಟ್ ಬಹುಮತ ಸಾಬೀತು ಮಾಡುತ್ತೆ : ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಾಗಿದೆ. ಅವರು ನೂರರಷ್ಟು ಬಹುಮತ ಸಾಬೀತು ಮಾಡುತ್ತಾರೆ. ಅವರು ನಮ್ಮ ಜಿಲ್ಲೆಯವರಾಗಿದ್ದು ಅವರಿಗೆ ಒಳ್ಳೆಯದಾಗಲಿ ಎಂದು ಚೆಲುವರಾಯಸ್ವಾಮಿ ಹೇಳಿದರು.