BSYಗೆ ತಲೆನೋವಾದ ಮರಾಠಿ, IPL ಆಯೋಜಿಸಿದ ದುಬೈಗೆ 100 ಕೋಟಿ; ನ.17ರ ಟಾಪ್ 10 ಸುದ್ದಿ!
ಬೆಂಗಳೂರು ಗಲಭೆ ಆರೋಪಿ ಸಂಪತ್ ರಾಜ್‌ಗೆ ಬೆಂಬಲ ನೀಡಿದವರ ಮಾಹಿತಿ ಬಹಿರಂಗವಾಗಿದೆ. ಏಕಾಏಕಿ ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದ ಸಿಎಂ ಯಡಿಯೂರಪ್ಪ ಮೇಲೆ ರಾಜೀನಾಮೆ ಒತ್ತಡ ಹೆಚ್ಚಾಗಿದೆ. ಪಿಎಂ ಮೋದಿಯ ಆತ್ಮನಿರ್ಭರ ಕನಸಿಗೆ ಸಾಧು ಸಂತರ ಸಾಥ್ ನೀಡಿದ್ದಾರೆ. ಯುಎಇ ಕ್ರಿಕೆಟ್ ಮಂಡಳಿಗೆ ಬಿಸಿಸಿಐನಿಂದ 100 ಕೋಟಿ, ರಚಿತಾ ರಾಮ್ ಹೊಸ ಅವತಾರ ಸೇರಿದಂತೆ ನವೆಂಬರ್ 17 ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಸಂಪತ್ ರಾಜ್ ಬೆನ್ನಿಗೆ ನಿಂತವರ ಮಾಹಿತಿ ಬಹಿರಂಗ
ಬೆಂಗಳೂರು ಗಲಭೆ ಕೇಸ್‌ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅರೆಸ್ಟ್ ಆಗಿದ್ದಾರೆ. ಗಲಭೆ ನಡೆದಾಗಿನಿಂದ ಇಲ್ಲಿಯವರೆಗಿನ ಬೆಳವಣಿಗೆಗಳ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆಗೆ ಆಗ್ರಹ : ತೀವ್ರ ಪ್ರತಿಭಟನೆ...
ಏಕಾಏಕಿ ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕೂಡಲೇ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ..
ಪಿಎಂ ಮೋದಿಯ ಆತ್ಮನಿರ್ಭರ ಕನಸಿಗೆ ಸಾಧು ಸಂತರ ಸಾಥ್!...
ಪಿಎಂ ಮೋದಿ ಸೋಮವಾರದಂದು ಜೈನ ಆಚಾರ್ಯ ಶ್ರೀ ವಿಜಯವಲ್ಲಭ ಸುರಿಶ್ವರ್ ಜೀ ಮಹಾರಾಜ್‌ರವರ 151ನೇ ಜಯಂತಿ ಆಚರಣೆ ವೇಳೆ 'Statue Of Peace' ಅನಾವರಣಗೊಳಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು ಯಾವ ರೀತಿ ಸ್ವಾತಂತ್ರ್ಯ ಆಂದೋಲನದ ಮುನ್ನುಡಿ ಭಕ್ತಿ ಆಂದೋಲನದ ಮೂಲಕ ಆರಂಭವಾಗಿತ್ತೋ, ಹಾಗೆಯೇ ಆತ್ಮನಿರ್ಭರ ಭಾರತದ ಮುನ್ನುಡಿಯನ್ನು ನಮ್ಮ ಸಾಧು ಸಂತರು ಬರೆಯಬಹುದೆಂದಿದ್ದರು.
ಸಿಬಲ್ ವಿರುದ್ಧ ಗುಡುಗಿದ ಗೆಹ್ಲೋಟ್: ಹಿರಿಯ ನಾಯಕರ ಅಸಮಾಧಾನ ಸ್ಫೋಟ!...
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನದ ಬಳಿಕ ಪಕ್ಷದೊಳಗಿನ ಅಸಮಾಧಾನ ಮತ್ತೊಮ್ಮೆ ಬಹಿರಂಗಗೊಂಡಿದೆ. ಪಕ್ಷದ ಇಬ್ಬರು ಗಣ್ಯ ನಾಯಕರಾದ ಅಶೋಕ್ ಗೆಹ್ಲೋಟ್ ಹಾಗೂ ಕಪಿಲ್ ಸಿಬಲ್ ಈ ವಿಚಾರವಾಗಿ ಎದುರು ಬದುರಾಗಿದ್ದಾರೆ.
ಯುಎಇ ಕ್ರಿಕೆಟ್ ಮಂಡಳಿಗೆ ಬಿಸಿಸಿಐನಿಂದ 100 ಕೋಟಿ!...
13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯಾವುದೇ ಅಡೆತಡೆಯಾಗದಂತೆ ಆಯೋಜಿಸಿದ್ದ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ 100 ಕೋಟಿ ರುಪಾಯಿ ಪಾವತಿಸಿದೆ ಎಂದು ವರದಿಯಾಗಿದೆ.
ಮತ್ತೆ ಸಿಗರೇಟ್ ಹಿಡಿದ ರಚಿತಾ ರಾಮ್; ಕೈಯಲ್ಲಿ ಗನ್ ನೋಡಿ ನೆಟ್ಟಿಗರು ಶಾಕ್!...
ಸಿಂಪಲ್, ಟ್ರೇಡಿಷನಲ್ ಹಾಗೂ ಹೋಮ್ಲಿ ಗರ್ಲ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ರಚಿತಾ ರಾಮ್, ವಿಭಿನ್ನ ಪಾತ್ರ ಆಯ್ಕೆಗೆ ಮುಂದಾಗಿದ್ದಾರೆ. ಕೈಯಲ್ಲಿ 12 ಸಿನಿಮಾಗಳಿದ್ದು ಒಂದಕ್ಕಿಂತ ಒಂದು ಭಿನ್ನವಾದ ಕಥೆಗಳು ಎನ್ನಲಾಗುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಶೇರ್ ಮಾಡಿಕೊಂಡ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿವೆ.
ಕಾಲೇಜಿಗೆ ಬಂದ ಒಬ್ಬಳೇ ವಿದ್ಯಾರ್ಥಿನಿ : ಪಾಠ ಮಾಡಿದ ಶಿಕ್ಷಕರು...
ರಾಜ್ಯದಲ್ಲಿ ಇಂದಿನಿಂದ ಕಾಲೇಜುಗಳು ಮತ್ತೆ ತೆರೆದಿವೆ. ಆದರೆ ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಆಗಮಿಸಲು ಭಯ ಪಡುತ್ತಿದ್ದು ಆಗಮಿಸಿಲ್ಲ
'5092 ಕೋಟಿ ರೂಪಾಯಿ ರೈತರ ಸಾಲ ಮನ್ನಾ'...
ಚಿಕ್ಕಬಳ್ಳಾಪುರದ ಹಾರೋಬಂಡೆ ಕ್ರಾಸ್ ಸಮೀಪದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ಕಟ್ಟಡಕ್ಕೆ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ಆರೋಗ್ಯ, ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಕೆ. ಸುಧಾಕರ್ ಹಾಗೂ ನಗರಾಭಿವೃದ್ಧಿ ಸಚಿವರಾದ ಬಿ. ಎ. ಬಸವರಾಜು ಅವರುಗಳು ಶಂಕುಸ್ಥಾಪನೆ ನೆರವೇರಿಸಿದರು.
ಭಾರತಕ್ಕೆ ಬರುತ್ತಿದೆ ಇವೋಕ್ ಅರ್ಬನ್ ಕ್ಲಾಸಿಕ್ ಎಲೆಕ್ಟ್ರಿಕ್ ಬೈಕ್!...
ಎಲೆಕ್ಟ್ರಿಕ್ ಬೈಕ್ ಇವೋಕ್ ಅರ್ಬನ್ ಕ್ಲಾಸಿಕ್ ಭಾರತಕ್ಕೆ ಆಗಮಿಸಿದೆ. ಬಿಡುಗಡೆಗೂ ಮೊದಲೇ ಅರ್ಬನ್ ಕ್ಲಾಸಿಕ್ ಬೈಕ್ ಮಾಹಿತಿ ಹಾಗೂ ಚಿತ್ರಗಳು ಬಹಿರಂಗವಾಗಿದೆ. ನೂತನ ಬೈಕ್ ಬೆಲೆ, ಮೈಲೇಜ್ ಸೇರಿದಂತೆ ಇತರ ಮಾಹಿತಿ ಇಲ್ಲಿವೆ.
ಬಿಜೆಪಿ ಸೇರ್ಪಡೆ ಸುದ್ದಿಗೆ ಕೊನೆಗೂ ಸ್ಪಷ್ಟನೆ ಕೊಟ್ಟ ಕಾಂಗ್ರೆಸ್ ಪ್ರಭಾವಿ ನಾಯಕ..!...
ಕಾಂಗ್ರೆಸ್‌ನ ಪ್ರಭಾವಿ ನಾಯಕ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿಗೆ ಇದೀಗ ಅವರೇ ಸ್ಪಷ್ಟನೆ ಕೊಟ್ಟಿದ್ದು, ಎಲ್ಲಾ ಊಹಾಪೋಗಳಿಗೆ ತೆರೆ ಎಳೆದಿದ್ದಾರೆ.