ನವದೆಹಲಿ(ನ.17): ಇವೋಕ್ ಬ್ರ್ಯಾಂಡ್ ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ. ಇವೋಕ್ ಕಂಪನಿಯ ಎಲೆಕ್ಟ್ರಿಕ್ ಬೈಕ್‌ಗಳು ಏಷ್ಯಾದಲ್ಲಿರುವ ಅತೀ ವೇಗದ ಎಲೆಕ್ಟ್ರಿಕ್ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಭಾರತದಲ್ಲಿ ಇವೋಕ್ ಅರ್ಬನ್ ಕ್ಲಾಸಿಕ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ.

470 ಕಿ.ಮೀ ಮೈಲೇಜ್, 15 ನಿಮಿಷದಲ್ಲಿ ಚಾರ್ಜಿಂಗ್, ಬರುತ್ತಿದೆ Evoke 6061 ಎಲೆಕ್ಟ್ರಿಕ್ ಬೈಕ್!.

ಭಾರತದಲ್ಲಿ ಬಿಡುಗಡೆಯಾಗಲಿರುವ ನೂತನ ಇವೋಕ್ ಅರ್ಬನ್ ಕ್ಲಾಸಿಕ್ ಎಲೆಕ್ಟ್ರಿಕ್ ಬೈಕ್, ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿ.ಮೀ ಮೈಲೇಜ್ ನೀಡಲಿದೆ. 90  ನಿಮಿಷದಲ್ಲೇ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಬೈಕ್ ಗರಿಷ್ಠ ವೇಗ 130 ಕಿ.ಮೀ ಪ್ರತಿ ಗಂಟೆಗೆ.

26ps ಪವರ್ ಹಾಗೂ 17nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿರುವ ಇವೋಕ್ ಅರ್ಬನ್ ಕ್ಲಾಸಿಕ್ ಬೈಕ್, 8.42 ಲಿಥಿಯಂ  ಐಯಾನ್ NMC ಬ್ಯಾಟರಿ ಪ್ಯಾಕ್ ಹೊಂದಿದೆ. 0-60 ಕಿ.ಮೀ ವೇಗವನ್ನು ಕೇವಲ 3 ಸೆಕೆಂಡ್‌ನಲ್ಲಿ ತಲುಪಲಿದೆ. 

ನೂತನ ಇವೋಕ್ ಅರ್ಬನ್ ಕ್ಲಾಸಿಕ್ ಬೈಕ್ ಬೆಲೆ 8,499 ಅಮೇರಿಕನ್ ಡಾಲರ್. ಇನ್ನು ಭಾರತೀಯ ರೂಪಾಯಿಗಳಲ್ಲಿ 6.33 ಲಕ್ಷ ರೂಪಾಯಿ. ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಇವೋಕಾ ಅರ್ಬನ್ ಕ್ಲಾಸಿಕ್ ಬೈಕನ್ನು ಪ್ರೊಜೆಕ್ಟ್ M1 ಎಂದು ನಾಮಕರಣ ಮಾಡಲಾಗಿದೆ.