Asianet Suvarna News Asianet Suvarna News

CM ಶಿಖರ ತ್ಯಜಿಸಿದ ಶಿಕಾರಿಪುರದ ಹುಲಿ, ರಾಜೀನಾಮೆಯಿಂದ ರಾಜ್ಯ BJP ಗಲಿಬಿಲಿ; ಜು.26ರ ಟಾಪ್ 10 ಸುದ್ದಿ!

ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ಅಂತ್ಯ ಸಿಕ್ಕಿದೆ. ಆದರೆ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ತೀವ್ರಗೊಂಡಿದೆ. ಇತ್ತ ಯಡಿಯೂರಪ್ಪ ರಾಜೀನಾಮೆಯಿಂದ ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಬಿಎಸ್‌ವೈಗೆ ನಿರಾಸೆ ದಿನವಾದರೆ, ದೇಶದಲ್ಲಿಂದು ಕಾಗ್ರಿಸ್ ವಿಜಯ್ ದಿವಸ್ ಆಚರಣೆ, ಹಿರಿಯ ನಟಿ ಜಯಂತಿ ವಿಧಿವಶ ಸೇರಿದಂತೆ ಜುಲೈ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ,

BS Yediyurappa Resigns As Karnataka CM to Kargil diwas top 10 News of July 26 ckm
Author
Bengaluru, First Published Jul 26, 2021, 4:42 PM IST
  • Facebook
  • Twitter
  • Whatsapp

ಮುಖ್ಯಮಂತ್ರಿ ಸ್ಥಾನಕ್ಕೆ ಬಿ. ಎಸ್‌. ಯಡಿಯೂರಪ್ಪ ರಾಜೀನಾಮೆ, ವಿದಾಯ ಭಾಷಣ!

BS Yediyurappa Resigns As Karnataka CM to Kargil diwas top 10 News of July 26 ckm

ಇಡೀ ರಾಜ್ಯ ಹಾಗೂ ದೇಶದ ಗಮನ ಸೆಳೆದಿದ್ದ ಕರ್ನಾಟಕದ ನಾಯಕತ್ವ ಬದಲಾವಣೆ ವಿಚಾರಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಹೌದು ಸಿಎಂ ಬಿಎಸ್‌. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ವಾಜಪೇಯಿ ಹೆಸರೆತ್ತಿ ಕೇಂದ್ರಕ್ಕೆ ಪರೋಕ್ಷ ಸಂದೇಶ ಕೊಟ್ರಾ ಬಿಎಸ್‌ವೈ?

BS Yediyurappa Resigns As Karnataka CM to Kargil diwas top 10 News of July 26 ckm

ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜ್ಯಪಾಲರನ್ನು ಇದನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಎಲ್ಲಾ ಸವಾಲುಗಳನ್ನೆದುರಿಸಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಅವಧಿ ಎರಡು ವರ್ಷಕ್ಕೆ ಕೊನೆಗೊಂಡಿದೆ. ಬಿಎಸ್‌ವೈ ಆಡಳಿತದ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ವಿದಾಯ ಭಾಷಣ ನೀಡಿರುವ ಯಡಿಯೂರಪ್ಪ, ರಾಜೀನಾಮೆ ಘೋಷಿಸಿದ್ದಾರೆ. ಆದರೆ ಇದರೊಂದಿಗೆ ಕೇಂದ್ರಕ್ಕೂ ಪರೋಕ್ಷ ಸಂದೇಶವೊಂದನ್ನು ನೀಡಿದ್ದಾರೆ.

ಬಿಎಸ್‌ವೈ ರಾಜೀನಾಮೆಗೂ ಮುನ್ನ ನಡೆದಿತ್ತು ಆ ನಾಲ್ವರು ನಾಯಕರ ನಿಗೂಢ ಸಭೆ!

BS Yediyurappa Resigns As Karnataka CM to Kargil diwas top 10 News of July 26 ckm

 ರಾಜಾಹುಲಿ ರಾಜೀನಾಮೆಗೆ ಶುರುವಾಯ್ತಾ ಕೌಂಟ್‌ಡೌನ್. ಸಂಜೆ ಆದೇಶ ನಾಳೆ ತೀರ್ಮಾನ. ಆ ನಾಲ್ವರು ನಾಯಕರ ನಿಗೂಢ ಸಭೆಯಲ್ಲಿ ನಡೆದಿದ್ದೇನು? ಇಪ್ಪತ್ನಾಲದಕು ಗಂಟೆಯಲ್ಲಿ ತೀರ್ಮಾನವಾಗುತ್ತಾ ರಾಜ್ಯ ನಾಯಕನ ಭವಿಷ್ಯ? ಗಂಡಾಂತರ ಗೆಲ್ತಾರಾ ಶಿಕಾರಿವೀರ? ಮತ್ತೆ ಮತ್ತೆ ಪಕ್ಷ ನಿಷ್ಠೆ ತೋದರಿಸಿದ್ದ ಬಿಎಸ್‌ವೈಗೆ ಅಗಗ್ನಿಪರೀಕ್ಷೆ ಎದುರಾಗಿದ್ದೇಕೆ? ಇಲ್ಲಿದೆ ಒಂದು ರಿಪೋರ್ಟ್‌

ರಾಜೀನಾಮೆ: ಯಡಿಯೂರಪ್ಪ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಸಿದ್ದರಾಮಯ್ಯ

BS Yediyurappa Resigns As Karnataka CM to Kargil diwas top 10 News of July 26 ckm

ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಬಿಎಸ್‌ವೈ ಪದತ್ಯಾಗ ಬಿಜೆಪಿಗೆ ನಡುಕ, ಕಾಂಗ್ರೆಸ್‌-ಜೆಡಿಎಸ್‌ಗೆ ಸುವರ್ಣಾವಕಾಶ!

BS Yediyurappa Resigns As Karnataka CM to Kargil diwas top 10 News of July 26 ckm

ಕಳೆದ ಕೆಲ ವಾರಗಳಿಂದ ಕರ್ನಾಟಕ ರಾಜಕಾರಣದಲ್ಲಿ ಎದ್ದಿದ್ದ ಎಲ್ಲಾ ಗೊಂದಲಗಳಿಗೆ ಬಿ. ಎಸ್‌. ಯಡಿಯೂರಪ್ಪನವರ ರಾಜೀನಾಮೆ ತೆರೆ ಎಳೆದಿದೆ. ಹೀಗಿದ್ದರೂ ಬಿಎಸ್‌ವೈ ಈ ನಿರ್ಧಾರದಿಂದ ಕರ್ನಾಟಕ ಬಿಜೆಪಿಗೆ ದೊಡ್ಡ ಸವಾಲೆಸೆಯುವುದರೊಂದಿಗೆ, ವಿರೋಧ ಪಕ್ಷಗಳಿಗೆ ಸುವರ್ಣಾವಕಾಶ ಒದಗಿಸಿದೆ ಎಂಬುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ. 

ಎಂದೂ ಮರೆಯದ ಕಾರ್ಗಿಲ್ ಸಮರ: ದುಷ್ಟ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದ ಭಾರತ!

BS Yediyurappa Resigns As Karnataka CM to Kargil diwas top 10 News of July 26 ckm

ಕಾರ್ಗಿಲ್‌ ಯುದ್ಧ... ಈ ಪದವೇ ಭಾರತೀಯರನ್ನು ರೋಮಾಂಚನಗೊಳಿಸುತ್ತದೆ. ಭಾರತೀಯ ಸೈನಿಕರ ಹೋರಾಟದ ಛಲ, ಶಕ್ತಿಗೆ ಸಾಕ್ಷಿಯಾದ ಯುದ್ಧವದು. ಅಲ್ಲದೆ ಪಾಕಿಸ್ತಾನ ಶಾಂತಿಯ ಮಾತಿನ ಬೆನ್ನಲ್ಲೇ ಭಾರತಕ್ಕೆ ಇರಿದ ಚೂರಿಯ ಗಾಯದ ಗುರುತೇ ಈ ಕಾರ್ಗಿಲ್‌. ಚಳಿಗಾಲದಲ್ಲಿ ಭಾರತದ ಪ್ರದೇಶವನ್ನು ಅಕ್ರಮಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಭಾರತ ಗಡಿಯಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಟ್ಟಹೊಡೆತದ ನೆನಪಿನ ದಿನವೇ ಕಾರ್ಗಿಲ್‌ ವಿಜಯ್‌ ದಿವಸ್‌.

ಖಲಿಸ್ತಾನ ಉಗ್ರರಿಂದ ರೈತ ಪ್ರತಿಭಟನೆ ಹೈಜಾಕ್; ಎಚ್ಚರಿಕೆ ನೀಡಿದ ರೈತ ಮುಖಂಡನಿಗೆ ಗೇಟ್‌ಪಾಸ್!

BS Yediyurappa Resigns As Karnataka CM to Kargil diwas top 10 News of July 26 ckm

ರೈತ ಪ್ರತಿಭಟನೆಯನ್ನು ಖಲಿಸ್ತಾನ ಉಗ್ರ ಸಂಘಟನೆ ಹೈಜಾಕ್ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ವಿಚಾರ ಬಹಿರಂಗ ಪಡಿಸಿದ ಮುಖಂಡನಿಗೆ ಸಂಯುಕ್ತ ಕಿಸಾನ್ ಮೋರ್ಚಾ ಗೇಟ್‌ಪಾಸ್ ನೀಡಿದೆ.

IPL 2021 ಭಾಗ 2: ಆರ್‌ಸಿಬಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

BS Yediyurappa Resigns As Karnataka CM to Kargil diwas top 10 News of July 26 ckm

ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಐಪಿಎಲ್‌ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 15ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಇನ್ನೂ 7 ಪಂದ್ಯಗಳನ್ನು ಆಡಬೇಕಿದೆ. ಇನ್ನುಳಿದ 7 ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಕನ್ನಡ ಚಿತ್ರರಂಗದ ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ!

BS Yediyurappa Resigns As Karnataka CM to Kargil diwas top 10 News of July 26 ckm

ಅನಾರೋಗ್ಯದಿಂದ ಬಳಲುತ್ತಿದ್ದ  ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ(76) ನಿಧನರಾಗಿದ್ದಾರೆ. 

ಕರ್ನಾಟಕದ ಮುಂದಿನ ಸಿಎಂ ಯಾರು? ದಿಲ್ಲಿಯಿಂದಲೇ ಅರುಣ್ ಸಿಂಗ್ ಪ್ರತಿಕ್ರಿಯೆ

BS Yediyurappa Resigns As Karnataka CM to Kargil diwas top 10 News of July 26 ckm

 ಬಿಎಸ್ ಯಡಿಯೂರಪ್ಪ ಅವರು ಇಂದು (ಸೋಮವಾರ) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕರ್ನಾಟಕದ ಮುಂದಿನ ಸಿಎಂ ಯಾರು ಎನ್ನುವುದು ಭಾರೀ ಚರ್ಚೆಯಾಗುತ್ತಿದೆ

Follow Us:
Download App:
  • android
  • ios