Asianet Suvarna News Asianet Suvarna News

‘ಮತ್ತೆ ಸಿಎಂ ಆಗಲಿದ್ದಾರೆ ಬಿ.ಎಸ್.ಯಡಿಯೂರಪ್ಪ’

ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ವಿಚಾರಗಳು ಭಾರೀ ಚರ್ಚೆ ಹುಟ್ಟು ಹಾಕುತ್ತಿವೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರವೇ ಬದಲಾಗಲಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿದ್ದು, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಾಯಕರೋರ್ವರು ಹೇಳಿದ್ದಾರೆ. 

BS Yeddyurappa Will Become CM Again In Karnataka Says KS Eshwarappa
Author
Bengaluru, First Published May 10, 2019, 11:54 AM IST

ಹುಬ್ಬಳ್ಳಿ : ರಾಜ್ಯದ ಎರಡು ಕ್ಷೇತ್ರಗಳಲ್ಲಿ ವಿಧಾನಸಭಾ ಉಪಚುನಾವಣೆ ನಡೆಯುತ್ತಿದ್ದು, ಪ್ರಬುದ್ಧ ಮತದಾರರು ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. 

 ಹುಬ್ಬಳ್ಳಿಯಲ್ಲಿ ಮಾತನಾಡಿದ ಈಶ್ವರಪ್ಪ, ಸಿ‌.ಎಸ್. ಶಿವಳ್ಳಿಗೆ ಮೈತ್ರಿ ಸರ್ಕಾರ ಮತ್ತು ಕಾಂಗ್ರೆಸ್‌ನವರು ಯಾವ ರೀತಿ ತೊಂದರೆ ಕೊಟ್ಟರು‌. ಯಾವರೀತಿ ಮನನೊಂದು ಅವರು ನಿಧನರಾದರು ಎನ್ನುವ ಭಾವನೆಯನ್ನು ಶ್ರೀರಾಮುಲು ಹೇಳಿದ್ದಾರೆ.  ಅದನ್ನ ಮತ್ತೆ ಚರ್ಚೆ ಮಾಡಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ‌ ಎಂದೂ ಈ ವೇಳೆ ಶ್ರೀ ರಾಮುಲು ಹೇಳಿಕೆ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೇ ಈಗಾಗಲೇ ಶ್ರೀ ರಾಮುಲು ಉತ್ತರ ನೀಡಿದ್ದಾರೆ ಎಂದು ಸಮರ್ಥನೆ ನೀಡಿದರು. 

ಇನ್ನು ಉಪ ಚುನಾವಣಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನವರು ಡಿ.ಕೆ. ಶಿವಕುಮಾರ್ ಬಂದಿದ್ದಾರೆಂದು ಹುಲಿ ತೋರಿಸುವ ಕೆಲಸ ಮಾಡುತ್ತಿದ್ದಾರೆ‌. ಕಾಂಗ್ರೆಸ್ ಪ್ರಚಾರದ ಪಟ್ಟಿ ದೊಡ್ಡದಿದೆ,  ಆದರೆ ಯಾವೊಬ್ಬ ಕಾಂಗ್ರೆಸ್ ನಾಯಕರು ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲ‌ ಎಂದು ಯಡಿಯೂರಪ್ಪ ಕೈ ನಾಯಕರ ವಿರುದ್ಧ ಹರಿಹಾಯ್ದರು. 

ಮಂಡ್ಯದಲ್ಲಿ ನಿಖಿಲ್ ಗೆ ಈಗ ಹೊಸ ಜವಾಬ್ದಾರಿ

ಇನ್ನು ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ವಿಚಾರ ಚರ್ಚಯಾಗುತ್ತಿದ್ದು, ಈ ಜನ್ಮದಲ್ಲಿ ಮತ್ತೆ ಅವರು ಮುಖ್ಯಮಂತ್ರಿಯಾಗುವುದಿಲ್ಲ.  4 - 5 ಶಾಸಕರು ಮಾತ್ರವೇ ಅವರು ಸಿಎಂ ಆಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಕೇವಲ ಹಗಲು ಕನಸು. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದರು. 

Follow Us:
Download App:
  • android
  • ios