ಮಂಡ್ಯ :  ಲೋಕಸಭಾ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಇಂದು ಶುಕ್ರವಾರ ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.

ಮಂಡ್ಯದಲ್ಲಿ  ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಜವಾಬ್ದಾರಿಯನ್ನು ನಿಖಿಲ್ ವಹಿಸಿಕೊಂಡಿದ್ದು, ಚುನಾವಣೆ ಮುಕ್ತಾಯವಾದ ಬಳಿಕ 2ನೇ ಬಾರಿ ನಿಖಿಲ್ ಜಿಲ್ಲೆಗೆ ಭೇಟಿ ಮಾಡುತ್ತಿದ್ದಾರೆ. 

‘ಲೋಕಸಭೆಯಲ್ಲಿ 22 ಸ್ಥಾನ, ಉಪ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು’

ಕೆ.ಆರ್ ಪೇಟೆಪುರಸಭೆ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪೂರ್ವಭಾವಿ ಸಭೆ ಇಂದು ನಡೆಯುತ್ತಿದ್ದು, ಈ ಸಭೆಯಲ್ಲಿ ನಿಖಿಲ್ ಪಾಲ್ಗೊಳ್ಳುತ್ತಿದ್ದಾರೆ.  

ಕೆ.ಆರ್ . ಪೇಟೆ ಶಾಸಕ ನಾರಾಯಣ ಗೌಡ ನಿವಾಸದಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ರಮೇಶ್ , ಸಚಿವ ಸಿ.ಎಚ್.ಪುಟ್ಟರಾಜು ಪಾಲ್ಗೊಳ್ಳಲಿದ್ದಾರೆ.