ಮುಂಬರುವ ವಿಧಾನಸಭೆ ಚುನಾವಣಾ ಕಣದಿಂದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಿಂದೆ ಸರಿಯಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣೆಗೆ ಸ್ಪರ್ಧಿಸಿದರೆ ಕ್ಷೇತ್ರದತ್ತ ಹೆಚ್ಚು ಒತ್ತು ನೀಡಬೇಕು, ಹೀಗಾಗಿ ಯಡಿಯೂರಪ್ಪ ಸ್ಪರ್ಧೆಯನ್ನೇ ಮಾಡದೆ ರಾಜ್ಯಾದ್ಯಂತ ಪ್ರಚಾರ ಹಾಗೂ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆನ್ನಲಾಗಿದೆ.
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣಾ ಕಣದಿಂದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಿಂದೆ ಸರಿಯಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಚುನಾವಣೆಗೆ ಸ್ಪರ್ಧಿಸಿದರೆ ಕ್ಷೇತ್ರದತ್ತ ಹೆಚ್ಚು ಒತ್ತು ನೀಡಬೇಕು, ಹೀಗಾಗಿ ಯಡಿಯೂರಪ್ಪ ಸ್ಪರ್ಧೆಯನ್ನೇ ಮಾಡದೆ ರಾಜ್ಯಾದ್ಯಂತ ಪ್ರಚಾರ ಹಾಗೂ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆನ್ನಲಾಗಿದೆ.
ಬಿಎಸ್ವೈ ಸ್ಪರ್ಧೆ ಮಾಡಿದ್ರೆ ಬೇರೆ ಪಕ್ಷಗಳು ಅವರನ್ನು ಶಿಕಾರಿಪುರಕ್ಕೇ ಕಟ್ಟಿ ಹಾಕ್ತಾರೆ, ಸ್ಪರ್ಧಿಸದೇ ಇದ್ದರೆ ರಾಜ್ಯಾದ್ಯಂತ ನಿರುಮ್ಮಳವಾಗಿ ಪ್ರಚಾರ ಮಾಡಬಹುದು ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಸೂಕ್ತ ರಣತಂತ್ರಗಳನ್ನು ರೂಪಿಸಬಹುದು. ಹೈಕಮಾಂಡ್ ಹೊರಿಸಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಬಹುದು ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.
ಕಾಂಗ್ರೆಸ್ಗೆ ಸದ್ಯ ಉಳಿದಿರುವ ದೊಡ್ಡ ರಾಜ್ಯ ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಸಿಗಬಹುದಾದ ಏಕೈಕ ರಾಜ್ಯವೂ ಕರ್ನಾಟಕ ಆಗಿರುವುದರಿಂದ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.
ಒಂದು ಕಡೆ ಉಪಚುನಾವಣೆ ಗೆಲುವು, ಭಿನ್ನಮತೀಯ ಚಟುವಟಿಕೆಗಳ ಭೀತಿ ಕಾಂಗ್ರೆಸ್ಗೆ ಅಷ್ಟಾಗಿ ಕಾಡ್ತಿಲ್ಲ, ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲೂ ಕಾಂಗ್ರೆಸ್ ತಂತ್ರ ಫಲಿಸಿದೆ. ಉಪಚುನಾವಣೆ ಸೋಲಿನಿಂದ ಬಿಜೆಪಿ ಕಂಗೆಟ್ಟಿದ್ದು ಹಾಗೂ ಪರಿವರ್ತನಾ ಯಾತ್ರೆಯಲ್ಲಿ ನಾಯಕರ ನಡುವಿನ ಭಿನ್ನಮತ ಬಹಿರಂಗವಾಗಿದೆ.
1972ರ ವಿಧಾನಸಭೆ ಚುನಾವಣೆಯಲ್ಲಿ ದೇವರಾಜ ಅರಸು ಕೂಡಾ ಈ ತಂತ್ರವನ್ನು ಅನುಸರಿಸಿದ್ದರು. ಇಂದಿರಾ ಗಾಂಧಿ ಆಣತಿಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ದೇವರಾಜ ಅರಸು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.
ಇತ್ತೀಚೆಗಿನ ದಾಹರಣೆ ನೋಡುವುದಾದರೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಅಖಿಲೇಶ್ ಯಾದವ್ ಕೂಡಾ 2017ರ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ
