ಅಬ್ಬಬ್ಬಾ... ಮಲ್ಯರ ಹಣ ತರೋಕೆ ಬ್ಯಾಂಕ್‌ಗಳು ವಕೀಲರಿಗೆ ಕೊಟ್ಟ ಫೀಸು!

First Published 16, Jun 2018, 12:28 PM IST
Britan Court Asks Vijay Mallya to Pay Rs 1.8 Crore to Indian Banks
Highlights

ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಬ್ರಿಟನ್ ನಲ್ಲಿ ನೆಲೆಯಾಗಿರುವ ಮಲ್ಯಗೆ ಅಲ್ಲಿಯೂ ಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ.  ಹಾಗಾದರೆ ವಿಜಯ್ ಮಲ್ಯ ಬ್ರಿಟನ್ ನ ಬ್ಯಾಂಕ್ ಗಳಿಗೂ ವಂಚಿಸಿದರೆ ಅಥವಾ ಇನ್ಯಾವ ಕಾನೂನುನಿಗೆ ವಿರುದ್ಧವಾದ ಕೆಲಸ ಮಾಡಿದರು ಎಂಬುದಕ್ಕೆ ಉತ್ತರ ಇಲ್ಲಿದೆ...

ಲಂಡನ್ ಜೂನ್ 16:  ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಬ್ರಿಟನ್ ನಲ್ಲಿ ನೆಲೆಯಾಗಿರುವ ಮಲ್ಯಗೆ ಅಲ್ಲಿಯೂ ಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ.  ಹಾಗಾದರೆ ವಿಜಯ್ ಮಲ್ಯ ಬ್ರಿಟನ್ ನ ಬ್ಯಾಂಕ್ ಗಳಿಗೂ ವಂಚಿಸಿದರೆ ಅಥವಾ ಇನ್ಯಾವ ಕಾನೂನುನಿಗೆ ವಿರುದ್ಧವಾದ ಕೆಲಸ ಮಾಡಿದರು ಎಂಬುದಕ್ಕೆ ಉತ್ತರ ಇಲ್ಲಿದೆ.

ಬಾಕಿ ಹಣ ವಸೂಲಿ ಮಾಡಲು ಕಾನೂನು ಹೋರಾಟಕ್ಕೆ ವೆಚ್ಚ ಮಾಡಿರುವ ಭಾರತದ 13 ಬ್ಯಾಂಕ್‌ಗಳಿಗೆ 1.8 ಕೋಟಿ ರೂಪಾಯಿ ಪಾವತಿಸಲು ಬ್ರಿಟನ್‌ ಹೈಕೋರ್ಟ್‌ ಸೂಚಿಸಿದೆ. ಅಲ್ಲದೇ ವಿಜಯ ಮಲ್ಯ ಮತ್ತು ಬ್ಯಾಂಕ್‌ಗಳು ಈ ವೆಚ್ಚದ ಬಗ್ಗೆ ಒಂದು ಮಾತುಕತೆಗೆ ಬರದಿದ್ದರೆ ನ್ಯಾಯಾಲಯ ಮರುಪರಿಶೀಲನೆ ಮಾಡುತ್ತದೆ ಎಂದು ಕೋರ್ಟ್ ಹೇಳಿದೆ.

ಗಂಟೆಗೆ 15 ಸಾವಿರ ನುಂಗುವ ಮಲ್ಯರ ವಿಮಾನ ಮುಂಬೈನಲ್ಲಿದೆ!

ವೆಚ್ಚ ಭರಿಸಿವ ಕುರಿತು ತಕರಾರು ಎತ್ತಿದ ಮಲ್ಯ ತೀರ್ಮಾನ ಮರು ಪರಿಶೀಲನೆ ಮಾಡುವಂತೆ ಕೇಳಿದ್ದರು. ಆದರೆ ಬ್ರಿಟನ್ ಕೋರ್ಟ್ ಮಲ್ಯ ಅರ್ಜಿ ವಜಾ ಮಾಡಿದ್ದು ಈ ಕೂಡಲೇ ಭಾರತೀಯ ಬ್ಯಾಂಕ್ ಗಳು ಕಾನೂನು ಹೋರಾಟಕ್ಕೆ ಖರ್ಚು ಮಾಡಿದ ಹಣ ಸಂದಾಯ ಮಾಡಲು ಸೂಚಿಸಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಭಾರತದ 13 ಬ್ಯಾಂಕ್ ಗಳಿಗೆ 9 ಸಾವಿರ ಕೋಟಿಗೂ ಅಧಿಕ ರೂಪಾಯಿ ವಂಚಿಸಿರುವ ಮಲ್ಯ ಬ್ರಿಟನ್ ಲ್ಲಿ ನೆಲೆಯಾಗಿದ್ದು ಮಲ್ಯರ ಅನೇಕ ಆಸ್ತಿಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

loader