ಆತ ಉತ್ತರ ಕರ್ನಾಟಕದ ಇಂಜೀನಿಯರಿಂಗ್ ಹುಡುಗ. ಉನ್ನತ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋದವನು ಮನೆಗೆ ವಾಪಸ್ ಆಗಿಲ್ಲ. ಜರ್ಮನಿಯ ವಿದೇಶಾಂಗ ಇಲಾಖೆಯಿಂದ ಬಂದ ಸುದ್ದಿಯಿಂದ ಇದೀಗ ಆತನ ಕುಟುಂಬವೇ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅಷ್ಟಕ್ಕೂ  ಬಂದ ಆ ಅಘಾತ ಸುದ್ದಿ ಏನಂತೀರಾ? ಇಲ್ಲಿದೆ ವಿವರ.

ಬಾಗಲಕೋಟೆ(ಜೂ.22): ಆತ ಉತ್ತರ ಕರ್ನಾಟಕದ ಇಂಜೀನಿಯರಿಂಗ್ ಹುಡುಗ. ಉನ್ನತ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋದವನು ಮನೆಗೆ ವಾಪಸ್ ಆಗಿಲ್ಲ. ಜರ್ಮನಿಯ ವಿದೇಶಾಂಗ ಇಲಾಖೆಯಿಂದ ಬಂದ ಸುದ್ದಿಯಿಂದ ಇದೀಗ ಆತನ ಕುಟುಂಬವೇ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅಷ್ಟಕ್ಕೂ ಬಂದ ಆ ಅಘಾತ ಸುದ್ದಿ ಏನಂತೀರಾ? ಇಲ್ಲಿದೆ ವಿವರ.

ಈ ಯುವಕನ ಹೆಸರು ಮಂಜುನಾಥ ಸಿದ್ದಣ್ಣ ಚೂರಿ. ಬಾಗಲಕೋಟೆ ಜಿಲ್ಲೆಯ ಸೀಮಿಕೇರಿ ಗ್ರಾಮದ ನಿವಾಸಿ. ಬಿಇ ಮುಗಿಸಿ ಎಂ.ಎಸ್ ಅಧ್ಯಯನಕ್ಕೆ ಅಂತಾ ಜರ್ಮನಿಗೆ ತೆರಳಿದ್ದ ಮಗ ನಾಪತ್ತೆಯಾಗಿದ್ದಾನೆ. ದಿಡೀರ್ ನಾಪತ್ತೆ ಸುದ್ದಿ ಕೇಳಿ ಇದೀಗ ಇಡೀ ಕುಟುಂಬವೇ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಕಳೆದ ವರ್ಷ ಮಾಸ್ಟರ್ ಆಪ್ ಸಾಪ್ಟವೇರ್ ಅಧ್ಯಯನಕ್ಕೆ ಅಂತಾ ಮಂಜುನಾಥ್ ಜರ್ಮನಿಯ ಹ್ಯಾಂಬರ್ಗ್ ಯೂನಿವರ್ಸಿಟಿಗೆ ತೆರಳಿದ್ದ. ಪ್ರತಿನಿತ್ಯ ಮಂಜು ತನ್ನ ತಾಯಿಗೆ ಫೋನ್ ಮಾಡುತ್ತಿದ್ದ. ಈ ಮಧ್ಯೆ ತಂದೆ ಅಪಘಾತದಲ್ಲಿ ಮೃತರಾಗಿದ್ದರಿಂದ ಮಂಜು ಕೊಂಚ ವಿಚಲಿತನಾಗಿದ್ದ. ಆದರೆ ಭಾನುವಾರದಿಂದ ಇತ್ತೀಚಿಗೆ ಒಂದೇ ಒಂದು ಕರೆಯನ್ನೂ ಮಾಡಿಲ್ಲ. ಹೀಗಾಗಿ ತಾಯಿ ಮಹಾನಂದೆ ಮನೆಗೆ ಬಂದವರನ್ನೇಲ್ಲಾ ಮಗನನ್ನ ಹುಡುಕಿಸಿಕೊಡುವಂತೆ ಗೋಳಿಡುತ್ತಿದ್ದಾರೆ.

ಇನ್ನು ಮಂಜುನಾಥ ತಾನಿದ್ದ ರೂಮ್'ನ ಕೀಯನ್ನ ತನ್ನ ಸ್ನೇಹಿತನಿಗೆ ಕೋರಿಯರ್ ಮೂಲಕ ತಲುಪಿಸಿ, ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಜರ್ಮನಿಯ ವಿದೇಶಾಂಗ ಇಲಾಖೆಯಿಂದ ಭಾರತೀಯ ವಿದೇಶಾಂಗ ಇಲಾಖೆಗೆ ಮಂಜುನಾಥನ ನಾಪತ್ತೆಯ ಮಾಹಿತಿ ಬಂದಿದ್ದು, ಮಂಜುನಾಥನ ಪೋಷಕರಿಗೆ ಸುದ್ದಿ ತಲುಪಿಸಿದ್ದಾರೆ. ಸುದ್ದಿ ತಿಳಿದ ಮಂಜುನಾಥನ ಪೋಷಕರು ಮಗನನ್ನ ಹುಡುಕಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಂತಾ ಹೋದ ಮಗ ನಾಪತ್ತೆಯಾಗಿದ್ದಾನೆ ಅಂದರೆ ಅದು ಪೋಷಕರಿಗೆ ಬರಸಿಡಿಲಿನ ಸುದ್ದಿಯೇ ಸರಿ. ಈ ಮೂಲಕ ಪೋಷಕರ ಅಳಲನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೇಳಿಸಿಕೊಂಡು ಮಂಜುನಾಥನ ಪತ್ತೆಗೆ ಕ್ರಮ ಕೈಗೊಳ್ಳಬೇಕಿದೆ. ಮತ್ತೆ ತಾಯಿ ಮಡಿಲಿಗೆ ಮಗನನ್ನ ಸೇರಿಸಬೇಕಾಗಿದೆ.