ಅದು ಇನ್ನೂ ಜಗತ್ತು ಏನೆಂದು ಅರಿಯದ ಕಂದಮ್ಮ. ಆದರೆ ವಿಧಿ ಆ ಪುಟ್ಟ ಜೀವದ ಜೊತೆ ಆಟ ಆಡಿದೆ. ಆಟ ಆಡಲು ಅಂತ ಹೋದ ಆ ಕಂದ ಹೋಗಿದ್ದು ಮಾತ್ರ ಸಾವಿನ ಮನೆಗೆ. ಇದಕ್ಕೆ ಕಾರಣವಾಗಿದ್ದು ಮಾತ್ರ ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯ.

ಬೆಂಗಳೂರು(ಮಾ.02): ಅದು ಇನ್ನೂ ಜಗತ್ತು ಏನೆಂದು ಅರಿಯದ ಕಂದಮ್ಮ. ಆದರೆ ವಿಧಿ ಆ ಪುಟ್ಟ ಜೀವದ ಜೊತೆ ಆಟ ಆಡಿದೆ. ಆಟ ಆಡಲು ಅಂತ ಹೋದ ಆ ಕಂದ ಹೋಗಿದ್ದು ಮಾತ್ರ ಸಾವಿನ ಮನೆಗೆ. ಇದಕ್ಕೆ ಕಾರಣವಾಗಿದ್ದು ಮಾತ್ರ ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯ.

ಈ ಪೋಟೋದಲ್ಲಿರುವ ಬಾಲಕನ ಹೆಸರು ರಾಕೇಶ್. ವಯಸ್ಸು ಇನ್ನೂ ಏಳು ವರ್ಷ. ನಾಗದೇವನಹಳ್ಳಿ ರಾಜಾಕಾಲುವೆ ಬಳಿ ಸಂಜೆ ೪:೩೦ ಸುಮಾರಿಗೆ ಶೌಚಕ್ಕೆ ತೆರಳಿದ್ದ . ಈ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಸಾವನಪ್ಪಿದ್ದಾನೆ. ೧ ಗಂಟೆಯಾದರೂ ಮಗ ಬರದ ಹಿನ್ನೆಲೆಯಲ್ಲಿ ರಾಕೇಶ್ ಕುಟುಂಬದವರು ಕಾಲುವೆ ಬಳಿ ಹೋಗಿ ನೋಡಿದಾಗ ರಾಕೇಶ್ ಕಾಲುವೆಗೆ ಬಿದ್ದಿರುವುದು ತಿಳಿದು ಬಂದಿದೆ.

ಮೃತ ಬಾಲಕ ರಾಕೇಶ್ ಮೂಲತಹ ಕಲಬುರಗಿಯ ಸೇಡಂ ನ ಹೊಡಗಿ ಗ್ರಾಮದ ನಿವಾಸಿಗಳಾದ ಭೀಮರಾಯ ಮತ್ತು ನಾಗಮ್ಮ ದಂಪತಿ ಮಗ. ಭೀಮರಾಯ ಕುಟುಂಬ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ನಾಗದೇವನಹಳ್ಳಿಗೆ ಗಾರೆ ಕೆಲಸಕ್ಕಾಗಿ ಬಂದು ನೆಲೆಸಿತ್ತು. ನಿನ್ನೆ ರಾಜೇಶ್ ಸಾವನ್ನಪಿದ ಕಾಲುವೆಯ ಪಕ್ಕದ ರಸ್ತೆಯ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುತಿದ್ರು..ಈ ವೇಳೆ ಆಟ ಆಡುತ್ತಿದ್ದ ರಾಕೇಶ್ ಕಾಲುವೆ ಬಳಿ ಶೌಚಕ್ಕೆ ಬಂದು ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದಾನೆ.

ಇನ್ನು ಬಾಲಕನ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್ ಪದ್ಮಾವತಿ ಮೃತನ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 1 ಲಕ್ಷ ಪರಿಹಾರ, ಸ್ಲಮ್ ಬೋರ್ಡ್'ನಲ್ಲಿ ಮನೆ ನೀಡುವುದಾಗಿ ತಿಳಿಸಿದ್ದರು. ಇದಲ್ಲದೆ ಈ ರಾಜಕಾಲುವೆ ಒತ್ತುವರಿ ಆಗಿದ್ದು ಹೀಗಾಗಿಯೇ ಅಲ್ಲಿ ತಡೆಗೋಡೆಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಸಬೂಬು ನೀಡಿದ್ದರು. ಅದೇನಿದ್ದರೂ ಬಿಬಿಎಂಪಿಯ ನಿರ್ಲಕ್ಷ್ಯವೋ..? ವಿಧಿಯ ಅಟ್ಟಹಾಸವೋ ಬಾಲಕ ಮಾತ್ರ ಸಾವಿನ ಮನೆ ಸೇರಿದ್ದು ವಿಪರ್ಯಾಸವೇ ಸರಿ.