ಕಳೆದ 4 ದಿನಗಿಳಿಂದ ಪ್ರತಿಭಟನೆಯಲ್ಲಿ ನಿರತರಾದ ವೈದ್ಯರಿಗೆ, ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಬಾಂಬೆ ಹೈಕೋರ್ಟ್ ಆದೇಶಿಸಿದೆ. ಅದೇ ರೀತಿ ವೈದ್ಯರು ಯಾವುದೇ ಭಯವಿಲ್ಲದೇ ಕರ್ತವ್ಯವನ್ನು ನಿರ್ವಹಿಸುವಂತೆ ಸೂಕ್ತ ಭದ್ರತೆ ಒದಗಿಸಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.
ನವದೆಹಲಿ (ಮಾ.23): ಕಳೆದ 4 ದಿನಗಿಳಿಂದ ಪ್ರತಿಭಟನೆಯಲ್ಲಿ ನಿರತರಾದ ವೈದ್ಯರಿಗೆ, ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಬಾಂಬೆ ಹೈಕೋರ್ಟ್ ಆದೇಶಿಸಿದೆ. ಅದೇ ರೀತಿ ವೈದ್ಯರು ಯಾವುದೇ ಭಯವಿಲ್ಲದೇ ಕರ್ತವ್ಯವನ್ನು ನಿರ್ವಹಿಸುವಂತೆ ಸೂಕ್ತ ಭದ್ರತೆ ಒದಗಿಸಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.
ಕರ್ತವ್ಯಕ್ಕೆ ಹಾಜರಾದ ವೈದ್ಯರ ಮೇಲೆ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳುವಂತಿಲ್ಲ. 15 ದಿನಗಳೊಳಗೆ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಬಾಂಬೆ ಹೈಕೋರ್ಟ್ ನ್ಯಾ. ತಿಳಿಸಿದ್ದಾರೆ.
ಏತನ್ಮಧ್ಯೆ ಸರ್ಕಾರ ಮತ್ತು ಆಡಳಿತವು ಸುರಕ್ಷತೆ ಬಗ್ಗೆ ಭರವಸೆ ನೀಡಿದರೆ ನಾವು ಕರ್ತವ್ಯಕ್ಕೆ ಹಾಜರಾಗಲು ಸಿದ್ಧ ಎಂದು ಮಹಾರಾಷ್ಟ್ರ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಒಕ್ಕೂಟ (ಎಂಎಆರ್ ಡಿ) ಅಫಿಡವಿಟ್ ಸಲ್ಲಿಸಿತ್ತು.
ರೋಗಿಗಳ ಸಂಬಂಧಿಕರು, ಕುಟುಂಬದವರಿಂದ ದೌರ್ಜನ್ಯ ಹೆಚ್ಚಾಗುತ್ತಿದ್ದು, ಆಸ್ಪತ್ರೆಗೆ ಸೂಕ್ತ ಭದ್ರತೆ ಒದಗಿಸಿ ಎಂದು 10 ಸಾವಿರಕ್ಕೂ ಅಧಿಕ ವೈದ್ಯರು ಸೋಮವಾರದಿಂದ ಪ್ರತಿಭಟನೆ ಶುರು ಮಾಡಿದ್ದರು.
