ನಾಲಗೆ ಹರಿಬಿಟ್ಟರೆ ನಮ್ಮ ನಾಲಗೆ ಅದಕ್ಕಿಂತಲೂ ಹರಿತವಾಗಲಿದೆ

Boje Gowda Slams Ananth Kumar Hegde
Highlights

ನಾಲಗೆ ಹರಿತ ಇದೆ ಎನ್ನುವ ಕಾರಣಕ್ಕಾಗಿ ಹರಿಯಬಿಡುವುದು ಸರಿಯಲ್ಲ. ನೀವು ನಾಲಗೆಯನ್ನು ನಿಯಂತ್ರಣದಲ್ಲಿಡಿ. ಇಲ್ಲದಿದ್ದರೆ ನಮ್ಮ‌ ನಾಲಗೆಯನ್ನು ಹರಿಯಬಿಡಬೇಕಾದೀತು ಎಂದು ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಉಡುಪಿ : ನಾಲಗೆ ಹರಿತ ಇದೆ ಎನ್ನುವ ಕಾರಣಕ್ಕಾಗಿ ಹರಿಯಬಿಡುವುದು ಸರಿಯಲ್ಲ. ನೀವು ನಾಲಗೆಯನ್ನು ನಿಯಂತ್ರಣದಲ್ಲಿಡಿ. ಇಲ್ಲದಿದ್ದರೆ ನಮ್ಮ‌ ನಾಲಗೆಯನ್ನು ಹರಿಯಬಿಡಬೇಕಾದೀತು ಎಂದು ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ನಾಲಗೆಯೂ ಹರಿತವಾಗಿದ್ದು, ಹರಿಯಬಿಟ್ಟಲ್ಲಿ ನಿಮಗಿಂತ ತುಚ್ಛವಾಗಿ‌ ಮಾತಾಡಬಲ್ಲೆವು ಎಂದಿದ್ದಾರೆ. 

ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿಗೆ ಬರಲು ಸಜ್ಜಾಗಿದ್ದಾರೆ. ಅಂತವರನ್ನು ಪಕ್ಷಕ್ಕೆ ಆಹ್ವಾನಿಸೋಣ ಎಂದ ಯಡಿಯೂರಪ್ಪ ಹೇಳಿಕೆಗೂ ಅವರು ತಿರುಗೇಟು ನೀಡಿದ್ದು, ಯಡಿಯೂರಪ್ಪನವರು ಓರ್ವ ಮುತ್ಸದ್ದಿ ರಾಜಕಾರಣಿಯಾಗಿದ್ದು, ಅವರಿಂದ ಇಂತಹ ಬಾಲಿಶ ಹೇಳಿಕೆ ಸರಿಯಲ್ಲ ಎಂದು ಉಡುಪಿಯಲ್ಲಿ ಬೋಜೇಗೌಡ ಹೇಳಿದರು. 

ಬಿಜೆಪಿ‌ ಸಂಸದರು ಮೊದಲು ನೆರೆ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಲಿ. ಬಳಿಕ ಅಲ್ಲಿ ಉಂಟಾದ ನಷ್ಟದ ಬಗ್ಗೆ‌ ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ನೀಡಲಿ. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಸರಕಾರದಿಂದ ಪರಿಹಾರ ಒದಗಿಸುವ ಕಾರ್ಯ ನಾವು ಮಾಡುತ್ತೇವೆ ಎಂದರು.

loader