ಬೆಂಗಳೂರು (ಏ.15): ಬೆಂಗಳೂರಿಗರ ಜೀವನಾಡಿಯಾಗಿರುವ ಬಿಎಂಟಿಸಿ ಸಂಸ್ಥೆ ಲಕ್ಷ ಲಕ್ಷ ಕೊಟ್ಟು ಖರೀದಿ ಮಾಡಲಾಗಿರುವ ವೋಲ್ವೋ ಬಸ್​’ಗಳನ್ನು ಗುಜರಿಗೆ ಹಾಕಿದೆ.

ಸುಮಾರು ಐವತ್ತಕ್ಕೂ ಹೆಚ್ಚು ವೋಲ್ವೋ ಬಸ್’​ಗಳು ರಸ್ತೆಗೆ ಇಳಿಯದೆ ನಿಂತ ಜಾಗದಲ್ಲೇ ನಿಂತು ಗುಜುರಿಗೆ ಸೇರಿವೆ.

ಮೆಜೆಸ್ಟಿಕ್​’ನ ಡಿಪೋ ನಂಬರ್​ 7 ರಲ್ಲಿ 95 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿರುವ ವೋಲ್ವೋ ಬಸ್’​ಗಳು ಚಾಲ್ತಿಯಲ್ಲಿ ಇಲ್ಲದೇ ಕಳೆದ ಒಂದು ವರ್ಷದಿಂದ ರಿಪೇರಿನೂ ಆಗದೆ ನಿಂತಲ್ಲೇ ನಿಂತಿವೆ.

ಹೀಗಿರುವಾಗಲೇ ಬಿಎಂಟಿಸಿ ಸಂಸ್ಥೆ ಮತ್ತೆ ಹೊಸ ಬಸ್’​ಗಳನ್ನ ಖರೀದಿ ಮಾಡಲು ಮುಂದಾಗಿದೆ. ಇರುವ ಬಸ್’​ಗಳನ್ನ ರಿಪೇರಿಮಾಡದೆ, ಹೊಸ ವೋಲ್ವೋ ಬಸ್​ಗಳನ್ನು ​ ಖರೀದಿ ಮಾಡಲು ಬಿಎಂಟಿಸಿ ಸಂಸ್ಥೆ, ತುದಿಕಾಲಲ್ಲಿ ನಿಂತಿದೆ.

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನುವ ಹಾಗೆ ಬಿಎಂಟಿಸಿ ಸಂಸ್ಥೆ ಸಾರ್ವಜನಿಕರ ಹಣವನ್ನು ಈ ರೀತಿ ಹಾಳು ಮಾಡುತ್ತಿದೆ. ಈ ಬಗ್ಗೆ ಬಿಎಂಟಿಸಿ ಅಧ್ಯಕ್ಷರನ್ನು ಕೇಳಿದಾಗ, ನಾನು ಬಂದ ಮೇಲೆ ಅರ್ಧದಷ್ಟು ಬಸ್’​ಗಳನ್ನು ರಿಪೇರಿ ಮಾಡಿಸಿದ್ದೇನೆ. ಉಳಿದ ಬಸ್​’ಗಳನ್ನ ರಿಪೇರಿ ಮಾಡದೇ ವೊಲ್ವೋ ಕಂಪನಿಯವರು ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

(ಸಾಂದರ್ಭಿಕ ಚಿತ್ರ)