2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳುವ ಬಗ್ಗೆ ತಮ್ಮ ಸರ್ಕಾರ ಕೈಗೊಂಡಿರುವ ಯೋಜನೆಗಳ ಕುರಿತ ನೀಲಿನಕಾಶೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದರು.

ನವದೆಹಲಿ: 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳುವ ಬಗ್ಗೆ ತಮ್ಮ ಸರ್ಕಾರ ಕೈಗೊಂಡಿರುವ ಯೋಜನೆಗಳ ಕುರಿತ ನೀಲಿನಕಾಶೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದರು.

‘ಕೃಷಿ 2022: ರೈತರ ಆದಾಯ ದ್ವಿಗುಣ’ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮ ಮಹತ್ವಾಕಾಂಕ್ಷಿ ಗುರಿ ತಲುಪಲು ನಾಲ್ಕು ಅಂಶಗಳ ಸಿದ್ಧಾಂತ ಪ್ರತಿಪಾದಿಸಿದರು. ರೈತರು ತಮ್ಮ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು, ಕನಿಷ್ಠ ಬೆಂಬಲ ಬೆಲೆ ಏರಿಕೆ, ಕೃಷಿ ತ್ಯಾಜ್ಯ ತಡೆಯುವುದು ಮತ್ತು ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವುದು ರೈತರ ಆದಾಯ ದ್ವಿಗುಣಗೊಳ್ಳುವುದಕ್ಕೆ ಉತ್ತಮ ಮಾರ್ಗ ಎಂದು ಮೋದಿ ಪ್ರತಿಪಾದಿಸಿದರು.

ಕೈಗೊಂಡ ಕ್ರಮಗಳು ಹಾಗೂ ಸಲಹೆಗಳು

*ಯೂರಿಯಾದೊಂದಿಗೆ ಬೇವು ಮಿಶ್ರಣ ಮಾಡುವುದರಿಂದ ರಸಗೊಬ್ಬರದ ಗುಣಮಟ್ಟ ಹೆಚ್ಚಿ ಉತ್ಪಾದನೆ ಹೆಚ್ಚುತ್ತದೆ, ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ.

* 2-3 ದಶಕಗಳಿಂದ ಬಾಕಿಯುಳಿದಿರುವ 99 ನೀರಾವರಿ ಯೋಜನೆಗಳನ್ನು ನಿಗದಿತ ಅವಧಿ ಯೊಳಗೆ 80,000 ಕೋಟಿ ರು. ವೆಚ್ಚದಲ್ಲಿ ಪೂರ್ಣ

* 22,000 ಗ್ರಾಮೀಣ ಮಾರುಕಟ್ಟೆಗಳ ಉನ್ನತೀಕರಣ, ಉತ್ಪಾದನಾ ಸ್ಥಳಗಳಿಂದ 10-15

ಕಿ.ಮೀ. ಅಂತರದಲ್ಲಿ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು ವ್ಯವಸ್ಥೆ. ಕೃಷಿ ಸಾಲ 8 ಲಕ್ಷ ಕೋಟಿ ರು.ಯಿಂದ 11 ಲಕ್ಷ ಕೋಟಿ ರು.ಗೆ ಏರಿಕೆ.

ಸೌರ ವಿದ್ಯುತ್ ಬಳಕೆಗೆ ಉತ್ತೇಜನ, ಕೃಷಿ ತ್ಯಾಜ್ಯಗಳ ಸದ್ಬಳಕೆಗೆ ಪ್ರೋತ್ಸಾಹ. ಪೆಟ್ರೋಲ್‌ಗೆ ಶೇ. 10ರಷ್ಟು ಎಥೆನಾಲ್‌ಮಿಶ್ರಣಕ್ಕೆ ಅನುಮತಿ