Asianet Suvarna News Asianet Suvarna News

ಬ್ಲೂ ವೇಲ್‌ಗೆ ಬಿ.ಟೆಕ್ ವಿದ್ಯಾರ್ಥಿ ಬಲಿ

- ಸದಾ ಕಂಪ್ಯೂಟರ್ ಮುಂದೆ ಕೂರುತ್ತಿದ್ದ ಬಿ.ಟೆಕಿ ವಿದ್ಯಾರಥಿ

- ಪ್ಲಾಸ್ಟಿಕ್ ಮುಖಕ್ಕೆ ಹಾಕಿಕೊಂಡು, ಉಸಿರುಗಟ್ಟಿಸಿಕೊಂಡ ಸಾವು.

Blue whale b tech students ends life

ಹೈದರಾಬಾದ್: ಕಳೆದ ಕೆಲವು ದಿನಗಳಿಂದ ಬ್ಲೂ ವೇಲ್‌ಗೆ ಬಲಿಯಾದವರ ಸುದ್ದಿ ಕಡಿಮೆಯಾದಂತೆ ಕಾಣುತ್ತಿತ್ತು, ಈ ಮಾರಾಣಾಂತಿಕ ವೀಡಿಯೋ ಗೇಮ್‌ ವಿರುದ್ಧ ಸರಕಾರ ತೆಗೆದುಕೊಂಡ ಕ್ರಮ ಫಲ ನೀಡಿದೆ ಎಂದು ಕೊಳ್ಳುತ್ತಿರುವಾಗಲೇ, ಬಿ.ಟೆಕ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಬ್ಲೂ ವೇಲ್‌ಗೆ ಬಲಿಯಾಗಿದ್ದಾನೆಂದು ಶಂಕಿಸಲಾಗಿದೆ.

ಪಿಲಣಿಯ ಬಿಟ್ಸ್ ವಿದ್ಯಾರ್ಥಿ 19 ವರ್ಷದ ಟಿ.ವರುಣ್ ಆತ್ಮಹತ್ಯೆಗೆ ಶರಣಾದವನು. ಎರಡನೇ ವರ್ಷದ ಪದವಿ ಓದುತ್ತಿದ್ದ ವರುಣ್, ರಜೆಗೆಂದು ಗಂಡಿಪೇಟೆಯ ತಮ್ಮ ಮನೆಗೆ ತೆರಳಿದ್ದಾಗ, ಮುಖಕ್ಕೆ ಪ್ಲಾಸ್ಟಿಕ್ ಬ್ಯಾಗ್ ಹಾಕ್ಕೊಂಡು, ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವೀಡಿಯೋ ಗೇಮ್‌ನ ದಾಸರಾದವರಿಗೆ ಸಮಾಜ ವಿರೋಧಿ ಚಟುವಟಿಕೆಗಳನ್ನು ಮಾಡಲು ಪ್ರೇರೇಪಿಸಲಿದ್ದು, ವರುಣ್ ಇಂಟರ್ನೆಟ್ ಹಾಗೂ ವೀಡಿಯೋ ಗೇಮ್ಸ್‌  ದಾಸನಾಗಿದ್ದ ಎನ್ನಲಾಗಿದೆ.

'ಬಹುತೇಕ ಸಮಯವನ್ನು ವರುಣ್ ಕಂಪ್ಯೂಟರ್ ಮುಂದೆಯೇ ಕಳೆಯುತ್ತಿದ್ದ. ಆತನ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ. ತನಿಖೆ ವೇಳೆಸಾವಿಗೆ ಸ್ಪಷ್ಟ ಕಾರಣ ತಿಳಿಯಬಹುದು,' ಎಂದು ತನಿಖಾ ಅಧಿಕಾರಿ ಹೇಳಿದ್ದಾರೆ.

ಅನುಮಾನಸ್ಪದ ಸಾವೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.

Latest Videos
Follow Us:
Download App:
  • android
  • ios