ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶ ಹಾಗೂ ಉತ್ತರಖಂಡದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿರುವುದಕ್ಕೆ ಕೇವಲ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಆತಂಕಗೊಂಡಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ಕೂಡಾ ತಲೆಕೆಡಿಸಿಕೊಂಡಿದೆಯಂತೆ.

ನವದೆಹಲಿ (ಮಾ.16): ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶ ಹಾಗೂ ಉತ್ತರಖಂಡದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿರುವುದಕ್ಕೆ ಕೇವಲ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಆತಂಕಗೊಂಡಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ಕೂಡಾ ತಲೆಕೆಡಿಸಿಕೊಂಡಿದೆಯಂತೆ.

‘ಕೆಲವು ವಿಚಾರಗಳಲ್ಲಿ ಬಿಗಿನಿಲುವು ತೆಗೆದುಕೊಳ್ಳುವ ನರೇಂದ್ರ ಮೋದಿ ಚೀನಾಗೆ ಸವಾಲಾಗಿದ್ದಾರೆ. ಹೀಗಿರುವಾಗ ಭಾರತದಲ್ಲಿ ಬಿಜೆಪಿ ಬಲವಾಗಿ ಬೇರೂರಿ ಅಧಿಕಾರ ಹಿಡಿದರೆ ಅಂತರಾಷ್ಟ್ರೀಯ ವಿಷಯಗಳ ನಿಲುವಿನಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಬಿಜೆಪಿ ಗೆಲುವು ಚೀನಾಗೆ ಸಂತೋಷದ ವಿಚಾರವಲ್ಲ' ಎಂದು ಕಮ್ಯೂನಿಸ್ಟ್ ಪಕ್ಷದ ನಿಯಂತ್ರಣದಲ್ಲಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆ ವಿಶ್ಲೇಷಿಸಿದೆ.