ಬೆಂಗಳೂರು [ಜು.28]: ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿರುವ ಬಿಜೆಪಿ ವಿಶ್ವಾಸ ಮತ ಯಾಚನೆಗೆ ಸಜ್ಜಾಗಿದೆ. ಅಲ್ಲದೇ 105 ಶಾಸಕರು ಒಗ್ಗಟ್ಟಾಗಿದ್ದಾರೆ. ಒಬ್ಬರು ಪಕ್ಷೇತರರು ಬೆಂಬಲ ಕೊಡುವ ಸಾಧ್ಯತೆ ಇದೆ ಎಂದು ಬಿಜೆಪಿ ಸಂಸದೆ ಶೊಭಾ ಕರಂದ್ಲಾಜೆ ಹೇಳಿದ್ದಾರೆ.

ವಿಶ್ವಾಸ ಮತದಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನಮ್ಮಲ್ಲಿದೆ. ಮುಂದಿನ ಐದಾರು ತಿಂಗಳಲ್ಲಿ ಬಿಜೆಪಿ ಬಹುಮತದ ಸರ್ಕಾರ ಆಗಿ ಮೂಡಿ ಬರಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.   

'ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು!'

ಇನ್ನು ಅಧಿವೇಶನದಲ್ಲಿ ಎರಡು ದಿನಗಳಲ್ಲಿ ಶಾಸಕರು ಹೇಗೆ ನಡೆದುಕೊಂಡು ಹೋಗಬೇಕು, ಕಲಾಪ ಮುಗಿಯುವ ತನಕ ಸದನದಲ್ಲಿದ್ದು, ಶಿಸ್ತು ಕಾಪಾಡಲು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ ಎಂದರು. 

'ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು!'

ಇನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಹೀನಾಯವಾಗಿ ಸೋತಿದ್ದು, ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್ ಹೊತ್ತಿದ್ದರೂ ಪ್ರಯೋಜನವಾಗಿಲ್ಲ, ಮೈಸೂರು ಉಸಸ್ತುವಾರಿ ಹೊತ್ತ ಸಿದ್ದರಾಮಯ್ಯರಿಂದಲೂ ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ರಾಜ್ಯದ ಜನರ ಇವರಿಗೆ ತಕ್ಕ ಪಾಠ ಕಲಿಸಿದ್ದು, ಯಾವುದೇ ಸ್ಟ್ರಾಟಜಿ ಮಾಡಿದರೂ ಪ್ರಯೋಜನವಾಗುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.