ಮೈಸೂರು[ಜು.28]: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹೈಡ್ರಾಮಾ ಕೊನೆಯ ಹಂತಕ್ಕೆ ತಲುಪಿದ್ದು, ನಾಳೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಸದ್ಯ ಈ ಕುರಿತಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು ಎಂದು ಬಾಂಬ್ ಹಾಕಿದ್ದಾರೆ.

ತಮ್ಮ ಮಗ ರಾಕೇಶ್ ಮೂರನೇ ವರ್ಷದ ಪುಣ್ಯ ತಿಥಿಗೆ ಮೈಸೂರಿಗೆ ತೆರಳಿರುವ ಸಿದ್ದರಾಮಯ್ಯ ಮಾಧ್ಯಮಗಳಿಗೆ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಕುರಿತಾಗಿ ಪ್ರತಿಕ್ರಿಯಿಸಿಸುತ್ತಾ ' ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು. ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ, ನಿರೀಕ್ಷೆಯೂ ಇಲ್ಲ. 221 ರಲ್ಲಿ 111 ಸ್ಥಾನ ಬಿಜೆಪಿಗೆ ಎಲ್ಲಿ ಇದೆ? ನೀವು ಅವರಿಗೆ ಕೇಳಬೇಕು. ' ಎನ್ನುವ ಮೂಲಕ ಬಾಂಬ್ ಸಿಡಿಸಿದ್ದಾರೆ.

ಅತೃಪ್ತರ ಕರೆ ವಿಚಾರವಾಗಿ ಸ್ಪಷ್ಟನೆ ನಿಡಿರುವ ಸಿದ್ದರಾಮಯ್ಯ 'ಅತೃಪ್ತ ನಾಯಕರು ಕರೆ ಮಾಡಿದ್ದರು ಅಂತಾ ಹೇಳಿದ್ದೇನೆ, ಪದೇ ಪದೇ ಆ ವಿಚಾರ ಪ್ರಸ್ತಾಪ ಬೇಡ. ಕರೆ ಮಾಡಿಲ್ಲ ಅಂತಾ ಹೇಳಿರುವವರು ನನಗೆ ಕರೆ ಮಾಡಿಲ್ಲ' ಎಂದಿದ್ದಾರೆ.