ಕೇಂದ್ರ ಸಚಿವ ಅನಂತ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತಾಡಿರುವ ಸಿಡಿ ತೋರಿಸಿ ಮರೆ ಮಾಚಲು ಯತ್ನಿಸುತ್ತಿದ್ದರು.  ಕಾಂಗ್ರೆಸ್ ಪಕ್ಷದ ಮಂತ್ರಿಗಳು ಸಾಲು ಸಾಲು ಹಗರಣದಲ್ಲಿ ಸಿಲುಕಿ ರಾಜಿನಾಮೆ ಪಡೆದಾಗಲೂ ಸಿಎಂ ಸಿದ್ದರಾಮಯ್ಯ ಕೇರ್ ಲೆಸ್ ಆಗಿಯೇ ಮಾತನಾಡಿದ್ದಾರೆ. ಇಷ್ಟು ದಿನ ಡೈರಿ ಬಿಡುಗಡೆ ಮಾಡಿ ಎನ್ನುತ್ತಿದ್ದವರೂ ಈಗ ದಾಖಲೆ ಹೊರ ಬರುತ್ತಿದ್ದಂತೆ ತನಿಖೆ ಮಾಡಿಸಿ ಎಂಬ ಭಂಡತನಕ್ಕೆ ಬಿದ್ದಿದ್ದಾರೆಂದು ಈಶ್ವರಪ್ಪ ಲೇವಡಿ ಮಾಡಿದರು.  

ಬೆಂಗಳೂರು (ಫೆ.24): ಎಂಎಲ್’ಸಿ ಗೋವಿಂದ ರಾಜ್ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ 1 ಸಾವಿರ ಕೋಟಿ ರೂ. ತಲುಪಿಸಿರುವ ಪ್ರಕರಣದ ಡೈರಿಯನ್ನು ಮಾಧ್ಯಮಗಳೇ ಬಿಡುಗಡೆ ಮಾಡಿದ್ದು ಸಿಎಂ ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ವಿಪಕ್ಷ ನಾಯಕ ಈಶ್ವರಪ್ಪ ಶಿವಮೊಗ್ಗದಲ್ಲಿ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯುರಪ್ಪನವರ ವಿರುದ್ಧ ಬಳಸಬಾರದ ಭಾಷೆಗಳನ್ನು ಬಳಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಸಚಿವ ಅನಂತ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತಾಡಿರುವ ಸಿಡಿ ತೋರಿಸಿ ಮರೆ ಮಾಚಲು ಯತ್ನಿಸುತ್ತಿದ್ದರು. ಕಾಂಗ್ರೆಸ್ ಪಕ್ಷದ ಮಂತ್ರಿಗಳು ಸಾಲು ಸಾಲು ಹಗರಣದಲ್ಲಿ ಸಿಲುಕಿ ರಾಜಿನಾಮೆ ಪಡೆದಾಗಲೂ ಸಿಎಂ ಸಿದ್ದರಾಮಯ್ಯ ಕೇರ್ ಲೆಸ್ ಆಗಿಯೇ ಮಾತನಾಡಿದ್ದಾರೆ. ಇಷ್ಟು ದಿನ ಡೈರಿ ಬಿಡುಗಡೆ ಮಾಡಿ ಎನ್ನುತ್ತಿದ್ದವರೂ ಈಗ ದಾಖಲೆ ಹೊರ ಬರುತ್ತಿದ್ದಂತೆ ತನಿಖೆ ಮಾಡಿಸಿ ಎಂಬ ಭಂಡತನಕ್ಕೆ ಬಿದ್ದಿದ್ದಾರೆಂದು ಲೇವಡಿ ಮಾಡಿದರು.

ಸತ್ಯಕ್ಕೆಸಾಕ್ಷಿಸಿಕ್ಕಿದೆ: ಸಿ.ಟಿ.ರವಿ

ಡೈರಿ ಬಹಿರಂಗವಾಗಿರುವುದರಿಂದ ಸತ್ಯಕ್ಕೆ ಸಾಕ್ಷಿ ಸಿಕ್ಕಿದ್ದು, ಸಿಎಂ ಹಾದಿಯಾಗಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಶಾಸಕ ಸಿ.ಟಿ ರವಿ ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ಕಪ್ಪ ಕಾಣಿಕೆಯನ್ನು ಸಿಎಂ ಹಾದಿಯಾಗಿ ಸಚಿವರು ನೀಡಿರುವುದು ಡೈರಿಯಲ್ಲಿ ಬಹಿರಂಗವಾಗಿದೆ ಎಂದರು.

ಕಪ್ಪ ಕಾಣಿಕೆ ನೀಡಿರುವ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯದ ಜನರ ಕ್ಷಮೆಕೇಳಬೇಕೆಂದು ಆಗ್ರಹಿಸಿದರು. ಹಣ ಲೂಟಿ ಮಾಡುವುದಕ್ಕಾಗಿ ರಾಜ್ಯದ ಜನ ಕಾಂಗ್ರೆಸ್’ಗೆ ಅಧಿಕಾರವನ್ನು ನೀಡಿಲ್ಲ,ಹಲವು ಯೋಜನೆಗಳ ಮೂಲಕ ಲೂಟಿ ಮಾಡಿದ್ದ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಕಾಣಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ನಾಯಕರು ಡೈರಿ ನಮ್ಮದಲ್ಲ ಎಂದು ಹೇಳಿತ್ತಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಡೈರಿ ಓರಿಜನಲ್ ಅಥವಾ ನಕಲಿ ಎನ್ನುವುದರ ಬಗ್ಗೆ ತನಿಖೆ ನಡೆಯುಲಿ ಎಂದು ತಿಳಿಸಿದರು.

ನೈತಿಕತೆಯಿದ್ದರೆ ಸಿದ್ದರಾಮಯ್ಯ ರಾಜಿನಾಮೆ ನೀಡಲಿ: ಶ್ರೀರಾಮುಲು

ಸಿಎಂ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮತ್ತು ಆಪ್ತ ಸಚಿವರು ಹೈಕಮಾಂಡ್ ನಾಯಕರಿಗೆ ಕಪ್ಪ ಕಾಣಿಕೆ ಸಲ್ಲಿಸಿದ ವಿವರ ಅಂಕಿಅಂಶಗಳ ದಾಖಲೆ ಸಹಿತ ಡೈರಿಯಿಂದ ರಾಜ್ಯದ ಜನತೆಮುಂದೆ ಬಹಿರಂಗವಾಗಿದೆ.

ನೈತಿಕತೆಯಿದ್ದರೆ ಸಿದ್ದರಾಮಯ್ಯ ರಾಜಿನಾಮೆ ನೀಡಲಿ, ಇಲ್ಲವಾದರೆ ಸಿಬಿಐ ತನಿಖೆಗೆ ವಹಿಸಲಿ ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಬಳ್ಳಾರಿಯಲ್ಲಿ ಹೇಳಿದ್ದಾರೆ.

ಸಿದ್ದರಾಮಯ್ಯ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ನಮ್ಮಮೇಲೆ ಐಟಿ ರೈಡ್ ಮಾಡಿಸಲಾಗುತ್ತಿದೆ ಎನ್ನುತ್ತಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ನನ್ನ ಮತ್ತು ಜನಾರ್ಧನ ರೆಡ್ಡಿ ಮನೆಗಳ ಮೇಲೆ ಐಟಿ ರೈಡ್ ಆಗಿತ್ತು ಆಗ ಯಾರ ಮೇಲೆಯೂ ಆರೋಪಮಾಡಿಲ್ಲ, ಇದೀಗ ಸಿಎಂ ಮೇಲೆ ಆರೋಪಕೇಳಿ ಬಂದ ಕೂಡಲೆ ಮೋದಿಯವರ ಮೇಲೆ ಬೆಟ್ಟುಮಾಡಿ ತೋರಿಸುವುದು ಸರಿಯಲ್ಲ ಎಂದಿದ್ದಾರೆ.

ಕಲಬುರಗಿಯಲ್ಲಿ ಪ್ರತಿಭಟನೆ

ಕಾಂಗ್ರೆಸ್ ಹೈಕಮಾಂಡಗೆ ಸಿಎಂ ಸಿದ್ದರಾಮಯ್ಯ ಕಪ್ಪ ಕಾಣಿಕೆ ಸಲ್ಲಿಸಿರುವುದು ಬಹಿರಂಗವಾಗಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕಲಬುರಗಿಯಲ್ಲಿಂದು ಪ್ರತಿಭಟನೆ ನಡೆಸಿದರು.