ಬಿಜೆಪಿ ಚಾಣಕ್ಯ ಅಮಿತ್​ ಶಾ ರಾಜ್ಯ ಭೇಟಿ ನಂತರ ಬಿಜೆಪಿ ನಾಯಕರು ಫುಲ್ ಚುರುಕಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ.  

ಬೆಂಗಳೂರು (ಜ.02):  ಬಿಜೆಪಿ ಚಾಣಕ್ಯ ಅಮಿತ್​ ಶಾ ರಾಜ್ಯ ಭೇಟಿ ನಂತರ ಬಿಜೆಪಿ ನಾಯಕರು ಫುಲ್ ಚುರುಕಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ.  

ಪರಿವರ್ತನಾ ಯಾತ್ರೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ್ತೊಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು ಆಗ ಬಸ್ ಬದಲು ಹೆಲಿಕಾಪ್ಟರ್​'ನಲ್ಲಿ ರಾಜ್ಯ ಪ್ರವಾಸ ಮಾಡುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ.  

ಅಮಿತ್ ಶಾ ಸೂಚನೆಯಂತೆ ರಾಜ್ಯ ಸುತ್ತಲು ಹೆಲಿಕಾಪ್ಟರ್ ಬಳಸುವಂತೆ ಬಿಎಸ್​ವೈಗೆ ಮನವಿ ಮಾಡಲಾಗಿದ್ದು,  ಗೆಲ್ಲಬಹುದಾದ 150 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಹೆಲಿಕಾಪ್ಟರ್'ನಲ್ಲೇ ಪ್ರಯಾಣ ಬೆಳೆಸಲಿದ್ದಾರೆ.

ಹೆಲಿಕಾಪ್ಟರ್​ ಪ್ರವಾಸದ ವೇಳೆ ಬಿಎಸ್ ವೈ ಜತೆ ಸ್ಟಾರ್ ಪ್ರಚಾರಕರೂ ಸಾಥ್​ ನೀಡಲಿದ್ದಾರೆ.

ಜನವರಿ ಅಂತ್ಯಕ್ಕೆ ಪರಿವರ್ತನಾ ಯಾತ್ರೆ ಮುಗಿಯಲಿದ್ದು  ಬಳಿಕ ಒಂದು ವಾರ ಬಿಎಸ್​ವೈ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.  ವಿಶ್ರಾಂತಿ ಬಳಿಕ ಫೆಬ್ರವರಿ 3ನೇ ವಾರದಲ್ಲಿ ಹೆಲಿಕಾಪ್ಟರ್ ಪ್ರವಾಸ ಆರಂಭಿಸುವಂತೆ ಅಮಿತ್​ ಶಾ  ಸೂಚಿಸಿದ್ದಾರೆ.  ಚುನಾವಣಾ ಪ್ರಚಾರಕ್ಕಾಗಿ ಪಕ್ಷದ ವತಿಯಿಂದಲೇ ಬಿಎಸ್​ವೈಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು   ಸುವರ್ಣ ನ್ಯೂಸ್​ಗೆ ಬಿಜೆಪಿಯ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.