ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಭೆಯ ನಂತರ ಅಂತಿಮಗೊಂಡ ಪಟ್ಟಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈ ಸೇರಿದೆ ಎನ್ನಲಾಗಿದ್ದು, ಸಂಭಾವ್ಯ ಸಚಿವರ ಹೆಸರುಗಳು ಚರ್ಚೆಯಲ್ಲಿವೆ.

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇಂದು ಅಥವಾ ನಾಳೆ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರು ಸಲ್ಲಿಸಿರುವ ಪ್ರತ್ಯೇಕ ಸಚಿವರ ಪಟ್ಟಿ ಬಗ್ಗೆ ಹೈಕಮಾಂಡ್‌ ಸೋಮವಾರ ಬೆಳಗ್ಗೆ 8.30ಕ್ಕೆ ಸಭೆ ನಡೆಸಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಸಭೆ ನಡೆಸಿ ಅಂತಿಮ ಪಟ್ಟಿಗೆ ಮುದ್ರೆ ಒತ್ತಲಾಗಿದೆ ಎನ್ನಲಾಗಿದೆ. ಸದ್ಯ ಹೈಕಮಾಂಡ್ ಕಳುಹಿಸಿದ ಪಟ್ಟಿಯೊಂದು ಸಿಎಂ ಡಿಕೆ ಶಿವಕುಮಾರ್ ಕೈಯಲ್ಲಿ ಸೇರಿದೆ ಎನ್ನಲಾಗುತ್ತಿದೆ.

ಟಿಬಿ ಜಯಚಂದ್ರ ಸ್ಪೀಕರ್ ಆಗುವ ಸಾಧ್ಯತೆಗಳಿವೆ. ಜೂ.3ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೇರಿ 13 ಮಂದಿ ಸಚಿವರ ಜತೆ ಪ್ರಮಾಣವಚನ ಸ್ವೀಕರಿಸಿದ್ದರು.

ನೂತನ ಸಚಿವರ ಸಂಭಾವ್ಯ ಪಟ್ಟಿ ಈ ಕೆಳಗಿನಂತಿದೆ

  1. ಚೆಲುವರಾಯಸ್ವಾಮಿ 
  2. ಹೆಚ್‌ ಸಿ ಬಾಲಕೃಷ್ಣ 
  3. ಜಮೀರ್ ಅಹ್ಮದ್ ಖಾನ್ 
  4. ಲಕ್ಷ್ಮಣ ಸವದಿ 
  5. ಗಾಯಿತ್ರಿ ಶಾಂತೇಗೌಡ 
  6. ಮಧು ಬಂಗಾರಪ್ಪ 
  7. ಅಜಯ್ ಸಿಂಗ್ 
  8. ಶಿವರಾಜ್ ತಂಗಡಗಿ 
  9. ರುದ್ರಪ್ಪ ಲಮಾಣಿ 
  10. ರಘುಮೂರ್ತಿ 
  11. ರಿಜ್ವಾನ್ ಅರ್ಷದ್ 
  12. ಶಿವಲಿಂಗೇಗೌಡ 
  13. ಪುಟ್ಟರಂಗಶೆಟ್ಟಿ 
  14. ಸಂತೋಷ್ ಲಾಡ್ 
  15. ನರೇಂದ್ರ ಸ್ವಾಮಿ
  16. ಮಂಕಾಳ ವೈದ್ಯ
  17. ವಿಜಯನಾಂದ ಕಾಶಪ್ಪನವರ್
  18. ಬಿ ನಾಗೇಂದ್ರ
  19. ಬಸವರಾಜ್ ರಾಯರೆಡ್ಡಿ
  20. ಕೆಎಸ್ ಬಸವಂತಪ್ಪ

ಪೊನ್ನಣ್ಣ (ಡೆಪ್ಯುಟಿ ಸ್ಪೀಕರ್) ಜಿಎಸ್ ಪಾಟೀಲ್ (ಸ್ಪೀಕರ್)