ಮುಂಬೈ(ನ.06): ಇದು ನಿಜಕ್ಕೂ ಅನುಭವಿ ರಾಜಕಾರಣಿಯ ಮಾತುಗಳು.. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಅವಕಾಶ ಸಿಕ್ಕರೂ, ಅದನ್ನು ಧಿಕ್ಕರಿಸಿ ಪ್ರತಿಪಕ್ಷ ಸ್ಥಾನದಲ್ಲಿ ಕೂರುವ ಮಾತುಗಳನ್ನಾಡಿದ್ದಾರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್. 

ಮಹಾರಾಷ್ಟ್ರ ಜನತೆ ಬಿಜೆಪಿ-ಶಿವಸೇನೆಗೆಸರ್ಕಾರ ರಚಿಸುವಂತೆ ಆಜ್ಞೆ ನೀಡಿದ್ದು, ಈ ಆಜ್ಞೆ ಧಿಕ್ಕರಿಸಿ ಶಿವಸೇನೆಯೊಂದಿಗೆ ನಾವು ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.

ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!

ಬಿಜೆಪಿ-ಶಿವಸೇನೆ ಪರವಾಗಿ ರಾಜ್ಯದ ಜನತೆ ತೀರ್ಪು ಕೊಟ್ಟಿದ್ದು ಅವರಿಬ್ಬರೇ ಸೇರಿ ಸರ್ಕಾರ ರಚನೆ ಮಾಡಬೇಕು. ಕಾಂಗ್ರೆಸ್ ಹಾಗೂ ಎನ್‌ಸಿಪಿ ಜವಾಬ್ದಾರಿಯುತ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿವೆ ಎಂದು ಪವಾರ್ ಹೇಳಿದ್ದಾರೆ. 

ಶಿವಸೇನೆ-ಎನ್‌ಸಿಪಿ ಸರ್ಕಾರ ರಚನೆಯ ಸಾಧ್ಯತೆಯನ್ನು ತಳ್ಳಿ ಹಾಕಿದ ಪವಾರ್, ಕಳೆದ 25 ವರ್ಷಗಳಿಂದ ಅವರು ಜೊತೆಯಾಗಿ ಇರುವ ಬಿಜೆಪಿ-ಶಿವಸೇನೆ ನಡುವೆ ಮೂಗು ತೂರಿಸಲು ಇಷ್ಟಪಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯನ್ನು ತಪ್ಪಿಸಲು ಉಳಿದಿರುವುದು ಬಿಜೆಪಿ-ಶಿವಸೇನೆ ಸರ್ಕಾರ ರಚನೆಯ ಮಾರ್ಗವೊಂದೇ ಎಂದು ಹಿರಿಯ ರಾಜಕಾರಣಿಒ ಶರದ್ ಪವಾರ್ ಸೂಚ್ಯವಾಗಿ ಹೇಳಿದ್ದಾರೆ. 

ಶಿವಸೇನೆ ನಾಯಕ ಸಂಜಯ್ ರಾವತ್ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಶರದ್ ಪವಾರ್, ಶಿವಸೇನೆ-ಎನ್‌ಸಿಪಿ ಸರ್ಕಾರ ರಚನೆಯಾದರೂ ಅಗತ್ಯ ಸಮಖ್ಯಾಬಲವನ್ನು ಅವರು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ್ದಾಗಿ ಹೇಳಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಸರ್ಕಾರಕ್ಕೆ ಯತ್ನ?

ಇನ್ನು ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಹಾಗೂ ಬಿಜೆಪಿಯ ನಿತಿನ್ ಗಡ್ಕರಿ ನಡುವಿನ ಮತುಕತೆ ಕುರಿತು ಪ್ರತ್ರಿಕ್ರಿಯಿಸಲು ನಿರಾಕರಿಸಿದ ಶರದ್ ಪವಾರ್, ಅವರ ಭೇಟಿಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.