ಸರ್ಕಾರ ರಚನೆಗೆ ಜೆಪಿಗೆ ಬೆಂಬಲ ಘೋಷಿಸಿದ ಜೆಜೆಪಿ| ಸರಳ ಬಹುಮತದೊಂದಿಗೆ ಸರ್ಕಾರ ರಚಿಸಲಿರುವ ಬಿಜೆಪಿ-ಜೆಜೆಪಿ ಮೈತ್ರಿಕೂಟ| ಅತ್ಯಾಚಾರ ಆರೋಪಿ ಗೋಪಾಲ್ ಕಂದಾ ಬೆಂಬಲ ಬೇಡ ಎಂದ ಬಿಜೆಪಿ| ಬಿಜೆಪಿ ಯೂ-ಟರ್ನ್‌ನಿಂದ ಕಂಗಾಲಾದ ಗೋಪಾಲ್ ಕಂದಾ|

ಚಂಡೀಘಡ್(ಅ.26): ಅತಂತ್ರ ವಿಧಾನಸಭೆ ರಚೆನೆಯಾಗಿರುವ ಹರಿಯಾಣದಲ್ಲಿ, ಸರ್ಕಾರ ರಚಿಸಲು ಬಿಜೆಪಿಗೆ ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ಬೆಂಬಲ ನೀಡಿದೆ. ಸರ್ಕಾರ ರಚನೆಗೆ ಪಕ್ಷೇತರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ಬಿಜೆಪಿಗೆ ಇದೀಗ ಸುಲಭ ಬಹುಮತ ದೊರೆತಂತಾಗಿದೆ.

ಹರಿಯಾಣದ ಕುಮಾರಸ್ವಾಮಿ ಆಗ್ತಾರಾ ದುಷ್ಯಂತ್: ದೋಸ್ತಿ ಬಯಸಿದೆ ಕಾಂಗ್ರೆಸ್!

ಇದಕ್ಕೂ ಮೊದಲು ಸರ್ಕಾರ ರಚನೆಗೆ ಕಸರತ್ತು ನಡೆಸಿದ್ದ ಬಿಜೆಪಿ, ಪಕ್ಷೇತರರು ಹಾಗೂ ಹರಿಯಾಣ ಲೋಕ್'ಹೀತ್ ಪಕ್ಷ(HLP)ದ ಶಾಸಕ ಗೋಪಾಲ್ ಕಂದಾ ಬೆಂಬಲಕ್ಕೆ ಹಾತೋರೆಯುತ್ತಿತ್ತು.

ಅದರಂತೆ HLPಯ ಗೋಪಾಲ್ ಕಂದಾ ಕೂಡ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಆದರೆ ಗೋಪಾಲ್ ಕಂದಾ ಮೇಲೆ ಗಗನಸಖಿಯೋರ್ವರ ಮೇಲೆ ಅತ್ಯಾಚಾರ ಮಾಡಿ ಆಕೆಯ ಆತ್ಮಹತ್ಯೆಗೆ ಕಾರಣವಾಗಿರುವ ಆರೋಪ ಇದ್ದು, ಇಂತಹ ವಿವಾದಾತ್ಮಕ ವ್ಯಕ್ತಿಯ ಬೆಂಬಲ ಪಡೆದ ಬಿಜೆಪಿ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Scroll to load tweet…

ನನಗೆ ಸಿಎಂ ಪಟ್ಟ ಕೊಡುವ ಪಕ್ಷಕ್ಕೆ ಬೆಂಬಲ: ಚೌಟಾಲಾ ಒಲಿಸಲು ಬಿಜೆಪಿ-ಕಾಂಗ್ರೆಸ್ ಹಂಬಲ!

ಇದೀಗ ಬಿಜೆಪಿಗೆ ದುಷ್ಯಣತ್ ಚೌಟಾಲಾ ಅವರ ಜೆಜೆಪಿ ಬೆಂಬಲ ದೊರೆತಿದ್ದು, ಸರಳ ಬಹುಮತದ ಸರ್ಕಾರ ರಚನೆಗೆ ಯಾವದೇ ತೊಡಕಿಲ್ಲ. ಹೀಗಾಗಿ ಗೋಪಾಲ್ ಕಂದಾ ಬೆಂಬಲವನ್ನು ಬಿಜೆಪಿ ಸ್ಪಷ್ಟವಗಾಇ ನಿರಾಕರಿಸಿದೆ.

ಬಿಜೆಪಿಗೆ ಅತ್ಯಾಚಾರ ಆರೋಪಿ ಕಂದಾ ಬೆಂಬಲ: ಇದೇನಾ ಬೇಟಿ ಬಚಾವೋ ಎಂದ ನೆಟ್ಟಿಗರು!

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿಗೆ ಗೋಪಾಲ್ ಕಂದಾ ಬೆಂಬಲದ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಬಿಜೆಪಿಯ ಯೂ-ಟರ್ನ್‌ನಿಂದ ಕಂಗಾಲಾಗಿರುವ ಕಂದಾ, ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.